Trump: ತಮ್ಮ ವೈರಿ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ್ದ ಅಮೆರಿಕ, ಈ ಬೆಳವಣಿಗೆಯ ಹಿನ್ನಲೆ ಭಾರತಕ್ಕೆ ಹೆಚ್ಚುವರಿ ದಂಡದ ಜೊತೆಗೆ ಶೇ.25ರಷ್ಟು ಸುಂಕ ವಿಧಿಸಿದರು. ಇದು ಒಂದಷ್ಟು ಗೊಂದಲ ಮತ್ತು ಅಸಮಾಧಾನಕ್ಕೆ ಕಾರಣವಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿದ್ದ ಎಚ್ಚರಿಕೆಗೆ ಸೆಡ್ಡು ಹೊಡೆದಿರುವ ಭಾರತ, ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸುವುದು ಖಚಿತವಾಗಿದೆ.
ಇದನ್ನೂ ಓದಿ: ರಕ್ಷಕ್ ಬುಲೆಟ್ ವಿರುದ್ಧ ಎಫ್ಐಆರ್ ದಾಖಲು! ಕಾರು ಡಿಕ್ಕಿಯಾಗಿ ಬೈಕ್ ಸವಾರನ ಕಾಲಿನ ಮೂಳೆ ಮುರಿತ.. Rakshak Bullet
ಭಾರತ ಸರ್ಕಾರದ ಮೂಲಗಳು ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಅಚ್ಚರಿಯನ್ನೇ ನೀಡಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳನ್ನು ಆಧರಿಸಿ ಮಾತನಾಡಿರುವ ಟ್ರಂಪ್, "ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದೆ ಎಂಬ ವಿಷಯ ನನ್ನವರೆಗೆ ಬಂದಿದೆ. ಭಾರತ ಸರ್ಕಾರ ಇನ್ಮುಂದೆ ರಷ್ಯಾದ ತೈಲವನ್ನು ಖರೀದಿಸುತ್ತಿಲ್ಲ ಎನ್ನಲಾಗಿದೆ. ಇದು ನಿಜವೋ, ಅಲ್ಲವೋ ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಅಸಕ್ಮಾತ್ ಅದು ನಿಜವಾಗಿದ್ದರೆ, ಒಳ್ಳೆಯ ನಿರ್ಧಾರ. ಇದರಲ್ಲಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ" ಎಂದಿದ್ದಾರೆ.
ಅಸಲಿಗೆ ಟ್ರಂಪ್ ಹೇಳಿಕೆಗೆ ಸೆಡ್ಡು ಹೊಡೆದಿರುವ ಭಾರತೀಯ ತೈಲ ಕಂಪನಿಗಳು, ತಾವು ರಷ್ಯಾದ ಪೂರೈಕೆದಾರರಿಂದ ಖರೀದಿಯನ್ನು ಮುಂದುವರಿಸುತ್ತಿವೆ ಎಂದು ಸ್ಪಷ್ಟಪಡಿಸಿವೆ. ಟ್ರಂಪ್ ಹೇಳಿಕೆಗಳಿಗೆ ಸರ್ಕಾರಿ ಮೂಲಗಳಿಂದ ಈ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ. ಭಾರತೀಯ ತೈಲ ಕಂಪನಿಗಳು ರಷ್ಯಾದ ಪೂರೈಕೆದಾರರಿಂದ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿವೆ. ಅಂತಾರಾಷ್ಟ್ರೀಯ ನಿಯಮಗಳಿಗೆ ಸಂಪೂರ್ಣವಾಗಿ ಅನುಸಾರವಾಗಿ ಕೈಗೆಟುಕುವ ಬೆಲೆಯಲ್ಲಿ ತೈಲ ಖರೀದಿಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿವೆ.
ಯುಕ್ರೇನ್ ಮೇಲೆ ನಿರಂತರವಾಗಿ ಯುದ್ಧ ನಡೆಸುತ್ತಿರುವ ರಷ್ಯಾ ಜೊತೆಗೆ ಭಾರತ ಕೈಜೋಡಿಸಿರುವ ವಿಷಯ ಟ್ರಂಪ್‌ಗೆ ಹಿಡಿಸಲಿಲ್ಲ. ದೊಡ್ಡ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಸರ್ಕಾರದ ನಿರ್ಧಾರ ಅಮೆರಿಕ ಅಧ್ಯಕ್ಷರಿಗೆ ಸರಿ ಅನಿಸಲಿಲ್ಲ. ರಷ್ಯಾ, ಯುಕ್ರೇನ್ ವಿರುದ್ಧದ ದಾಳಿ ನಿಲ್ಲಿಸಬೇಕು ಎಂದರೆ ಇತರೆ ದೇಶಗಳು ಅವರೊಂದಿಗೆ ವ್ಯಾಪಾರ-ವಹಿವಾಟು ನಡೆಸಬಾರದು ಎಂಬುದು ಟ್ರಂಪ್ ಉದ್ದೇಶ. ಆದರೆ, ಇದನ್ನೂ ಮೀರಿ ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದು ಟ್ರಂಪ್ ಸುಂಕ ಸಮರ ಮತ್ತು ಹೆಚ್ಚುವರಿ ದಂಡಕ್ಕೆ ಕಾರಣವಾಗಿದೆ,(ಏಜೆನ್ಸೀಸ್).