ನವದೆಹಲಿ: ಭಾರತದಲ್ಲಿ ಕರೊನಾ ವೈರಸ್ ಪ್ರಸರಣದ ಪ್ರಮಾಣ ಹೆಚ್ಚುತ್ತಿದೆ. ಈಗಂತೂ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಕೂಡ ತೆರವುಗೊಳಿಸಿದ್ದರಿಂದ ಸೋಂಕಿನ ನಿಯಂತ್ರಣವೂ ಕಷ್ಟವೇ ಆಗುತ್ತಿದೆ.
ಕಳೆದ 24 ಗಂಟೆಯಲ್ಲಿ 16,922 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗಿನ ದಾಖಲೆಯ ಸಂಖ್ಯೆ ಇದಾಗಿದೆ. ಹಾಗೇ ಒಂದೇ ದಿನದಲ್ಲಿ 418 ಜನರು ಮೃತಪಟ್ಟಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 4,73,105 ಏರಿದೆ.
ದೇಶದಲ್ಲಿ 1,86, 514 ಸಕ್ರಿಯ ಕರೊನಾ ಪ್ರಕರಣಗಳು ಇದ್ದು, 2,71, 697 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 14, 894 ಜನ ಕರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಇಂದು ತಿಳಿಸಿದೆ.
ಭಾರತದಲ್ಲಿ ಕರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ.57.43ರಷ್ಟಿದೆ ಎಂದು ಮಾಹಿತಿ ನೀಡಿದೆ.
ದೇಶದಲ್ಲಿ ಅತಿ ಹೆಚ್ಚು ಕರೊನಾ ಪ್ರಕರಣ ಇರುವುದು ಮಹಾರಾಷ್ಟ್ರದಲ್ಲಿ. ಆ ರಾಜ್ಯದಲ್ಲಿಯೇ 1,42,900 ಕರೊನಾ ಸೋಂಕಿತರು ಇದ್ದಾರೆ. ಇನ್ನುಳದಂತೆ ದೆಹಲಿ-70,390, ತಮಿಳುನಾಡು- 67,468 , ಗುಜರಾತ್28,943, ಉತ್ತರ ಪ್ರದೇಶದಲ್ಲಿ -19,557, ರಾಜಸ್ಥಾನ-16,009, ಪಶ್ಚಿಮ ಬಂಗಾಳ- 15,173 ಮತ್ತು ಮಧ್ಯಪ್ರದೇಶದಲ್ಲಿ -12,448 ಕರೊನಾ ಸೋಂಕಿತರು ಇದ್ದಾರೆ. (ಏಜೆನ್ಸೀಸ್)