ನವದೆಹಲಿ : ಕಳೆದ 24 ಗಂಟೆಗಳಲ್ಲಿ, ಭಾರತದಲ್ಲಿ 38,792 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. 41,000 ಸೋಂಕಿತರು ಗುಣಮುಖರಾಗಿದ್ದರೆ, 624 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ. ದೇಶಾದ್ಯಂತ 4,29,946 ಆ್ಯಕ್ಟೀವ್ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿನ್ನೆಯ ದಿನ(ಜುಲೈ 13) ಒಟ್ಟು 37,14,441 ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಈವರೆಗೆ ದೇಶದಲ್ಲಿ 38,76,97,935 ಡೋಸ್ ಕರೊನಾ ಲಸಿಕೆ ನೀಡಲಾಗಿದೆ.
ಕೇರಳ ಮತ್ತೂ ಹೆಚ್ಚು ಸಂಖ್ಯೆಯಲ್ಲಿ -14,539 ಹೊಸ ಪ್ರಕರಣಗಳು - ಸೋಂಕಿನ ಪ್ರಕರಣಗಳನ್ನು ವರದಿ ಮಾಡಿದೆ. ಎರಡನೇ ಅತಿ ಹೆಚ್ಚು ಸೋಂಕುಳ್ಳ ರಾಜ್ಯವಾದ ಮಹಾರಾಷ್ಟ್ರದಲ್ಲಿ 7,243 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)