ನ್ಯೂಸ್

ಭಾರತದಲ್ಲಿ ಹೆಚ್ಚುತ್ತಲೇ ಇದೆ ಕರೊನಾ ಪ್ರಸರಣ; ಕಳೆದ 24ಗಂಟೆಯಲ್ಲಿ ಭರ್ಜರಿ ಸೋಂಕಿತರು ಪತ್ತೆ..!

ನವದೆಹಲಿ: ಭಾರತದಲ್ಲಿ ಕರೊನಾ ವೈರಸ್​ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕಳೆದ 24 ಗಂಟೆಯಲ್ಲಿ ಬರೋಬ್ಬರಿ 2411 ಹೊಸ ಕರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 37,776ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.  ಹಾಗೇ 24 ಗಂಟೆಯಲ್ಲಿ 71 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1223ಕ್ಕೆ ಏರಿದೆ.

ರಾಷ್ಟ್ರಾದ್ಯಂತ ಲಾಕ್​ಡೌನ್ ಇದ್ದರೂ ಕರೊನಾ ಪ್ರಸರಣದ ಪ್ರಮಾಣ ಹೆಚ್ಚುತ್ತಲೇ ಇರುವುದು ಆತಂಕ ಮೂಡಿಸಿದೆ.  ಈಗಾಗಲೇ ದೇಶವನ್ನು ರೆಡ್​, ಆರೆಂಜ್​, ಗ್ರೀನ್​ ಝೋನ್​ಗಳನ್ನಾಗಿ ವಿಂಗಡಿಸಲಾಗಿದ್ದು, ಆಯಾ ಪ್ರದೇಶಗಳಲ್ಲಿ ಕರೊನಾ ಗಂಭೀರತೆ ನೋಡಿಕೊಂಡು, ಕೆಲವೊಂದು ಸಡಿಲಿಕೆಗಳೊಂದಿಗೆ ಲಾಕ್​ಡೌನ್​ನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. (ಏಜೆನ್ಸೀಸ್​)