Rajnath Singh 
ನ್ಯೂಸ್

ಭಾರತ ತನ್ನ ಸಮಗ್ರತೆಯನ್ನು ರಕ್ಷಿಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧವಾಗಿದೆ : ರಕ್ಷಣಾ ಸಚಿವ| Rajnath Singh

Rajnath Singh: ಅನಿರೀಕ್ಷಿತ ರಾಜಕೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ಸಣ್ಣ ಸಂಘರ್ಷಗಳಿಂದ ಹಿಡಿದು ದೊಡ್ಡ ಮಟ್ಟದ ಯುದ್ಧವೂ ಸೇರಿದಂತೆ ಎಲ್ಲಾ ರೀತಿಯ ಭದ್ರತಾ ಸವಾಲುಗಳಿಗೆ ಭಾರತದ ಸಶಸ್ತ್ರ ಪಡೆಗಳು ಸಿದ್ಧರಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ (ಆಗಸ್ಟ್, 27) ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶದ ಮಹೌದಲ್ಲಿರುವ ಸೇನಾ ಯುದ್ಧ ಕಾಲೇಜಿನಲ್ಲಿ ನಡೆದ ರಣ್ ಸಂವಾದದಲ್ಲಿ ಮಾತನಾಡಿದ ಸಿಂಗ್, ಭಾರತ ಯಾರ ಭೂಮಿಯನ್ನು ಬಯಸುವುದಿಲ್ಲ. ಆದರೆ ತನ್ನ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ಮಟ್ಟಕ್ಕೆ ಇಳಿಯಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಇಂದಿನ ಯುಗದಲ್ಲಿ, ಯುದ್ಧಗಳು ಎಷ್ಟು ಹಠಾತ್ ಮತ್ತು ಅನಿರೀಕ್ಷಿತವಾಗಿವೆ ಎಂದರೆ, ಯಾವುದೇ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ. ಯುದ್ದ ಎಷ್ಟು ಕಾಲ ನಡೆಯುತ್ತದೆ ಎಂದು ಊಹಿಸುವುದು ತುಂಬಾ ಕಷ್ಟ ಎಂದು ಸಿಂಗ್ ತಿಳಿಸಿದ್ದಾರೆ.

ಭಾರತೀಯ ಸೇನೆ ಪ್ರತಿಯೊಂದು ಪರಿಸ್ಥಿತಿಗೂ ಸಿದ್ಧರಾಗಿರಬೇಕು. ಅಂದರೆ, ಯಾವುದೇ ಯುದ್ಧವು ಎರಡು ತಿಂಗಳು, ನಾಲ್ಕು ತಿಂಗಳು, ಒಂದು ವರ್ಷ, ಎರಡು ವರ್ಷ, ಐದು ವರ್ಷಗಳವರೆಗೆ ಮುಂದುವರಿದರೆ, ನಾವು ಅದಕ್ಕೆ ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂದು ಸಿಂಗ್​ ಸೂಚಿಸಿದ್ದಾರೆ.

ಮುಂದುವರೆದು ಮಾತನಾಡಿದ ರಕ್ಷಣಾ ಸಚಿವ, ನಮಗೆ ಯಾರ ಭೂಮಿಯೂ ಬೇಡ. ಆದರೆ, ನಮ್ಮ ಭೂಮಿಯನ್ನು ರಕ್ಷಿಸಲು ನಾವು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದೇವೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಸೇರಿದಂತೆ ಭಾರತದ ಉನ್ನತ ಸೇನಾ ಅಧಿಕಾರಿಗಳ ಸಮ್ಮುಖದಲ್ಲಿ ಸಿಂಗ್​ ಸ್ಪಷ್ಟಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸ್ವಾವಲಂಬನೆಯು ಅತ್ಯಗತ್ಯ ಎಂಬುದನ್ನು ಇದರ ಸಾಧನೆಗಳು ಮತ್ತೊಮ್ಮೆ ಒತ್ತಿ ಹೇಳಿವೆ. ಸ್ವಾವಲಂಬನೆಯ ಹಾದಿಯಲ್ಲಿ ನಾವು ನಿಜಕ್ಕೂ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಆದರೆ ಇನ್ನೂ ಬಹಳ ದೂರ ಸಾಗಬೇಕಾಗಿದೆ ಎಂದು ರಾಜ್​ನಾಥ್​ ಸಿಂಗ್ ಹೇಳಿದರು.(ಏಜೆನ್ಸೀಸ್)