ನ್ಯೂಸ್

ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆ ಮರು ಆರಂಭಿಸಿದ ಅಂಚೆ ಇಲಾಖೆ

ನವದೆಹಲಿ: ಲಾಕ್​ಡೌನ್ ಮಧ್ಯೆಯೇ ಭಾರತೀಯ ಅಂಚೆ ಇಲಾಖೆ 15 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆಯನ್ನು ಮತ್ತು ಈಗಾಗಲೇ ಲಭ್ಯವಿರುವ ಸ್ಥಳಗಳಿಗೆ ಅಂತಾರಾಷ್ಟ್ರೀಯ ಟ್ರ್ಯಾಕ್ಡ್ ಪ್ಯಾಕೆಟ್ ಸೇವೆಗಳನ್ನು ಮರು ಆರಂಭಿಸಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ ಶುಕ್ರವಾರ ತಿಳಿಸಿದ್ದಾರೆ.

ವಿತರಣಾ ಸಮಯಸೂಚಿಗಳು ವಾಯುಯಾನ ಸೇವೆಗಳನ್ನು ಅವಲಂಬಿಸಿದ್ದು, ಇತರ ಅಂತಾರಾಷ್ಟ್ರೀಯ ಪಾರ್ಸೆಲ್ ಮತ್ತು ಪತ್ರಗಳ ಬುಕಿಂಗ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.