ನ್ಯೂಸ್

ಜಾಗತಿಕ ಸುರಕ್ಷತಾ ಸೂಚ್ಯಂಕದಲ್ಲಿ ಅಮೆರಿಕ, ಯುಕೆಯನ್ನು ಹಿಂದಿಕ್ಕಿದ ಭಾರತಕ್ಕೆ ಎಷ್ಟನೇ ಸ್ಥಾನ| Safety Index

Safety Index : 2025ರ ಸುರಕ್ಷತಾ ಸೂಚ್ಯಂಕದಲ್ಲಿ ಭಾರತವು ಅಮೆರಿಕ ಮತ್ತು ಯುಕೆಯನ್ನು ಹಿಂದಿಕ್ಕಿದೆ. ಇವುಗಳನ್ನು ಸಾಮಾನ್ಯವಾಗಿ ಸುರಕ್ಷಿತ, ಅಭಿವೃದ್ಧಿ ಹೊಂದಿದ ಪ್ರಜಾಪ್ರಭುತ್ವ ದೇಶಗಳೆಂದು ಪರಿಗಣಿಸಲಾಗುತ್ತದೆ.

ಚೀನಾ ಏಷ್ಯಾದ ಅತ್ಯಂತ ಸುರಕ್ಷಿತ ದೇಶ

ಮಂಗಳವಾರ(ಜು.22)ರಂದು ಬಿಡುಗಡೆಗೊಂಡ ಜಾಗತಿಕ ಸುರಕ್ಷತಾ ಸೂಚ್ಯಂಕದಲ್ಲಿ 147 ದೇಶಗಳ ಪಟ್ಟಿಯಲ್ಲಿ ಭಾರತ 55.7 ಅಂಕಗಳೊಂದಿಗೆ 66ನೇ ಸ್ಥಾನ ಪಡೆದಿದೆ. ಆ ಮೂಲಕ ಅಮೆರಿಕ ಹಾಗೂ ಯುಕೆಯನ್ನು ಹಿಂದಿಕ್ಕಿದೆ.

ಯುನೈಟೆಡ್ ಕಿಂಗ್‌ಡಮ್ (87 ನೇ, 51.7) ಮತ್ತು ಯುನೈಟೆಡ್ ಸ್ಟೇಟ್ಸ್ (89 ನೇ, 50.8) ಗಳನ್ನು ಪಡೆದುಕೊಂಡಿವೆ. ಈ ಸೂಚ್ಯಂಕದಲ್ಲಿ ಚೀನಾ ಏಷ್ಯಾದ ಅತ್ಯಂತ ಸುರಕ್ಷಿತ ದೇಶವಾಗಿ ಹೊರಹೊಮ್ಮಿದೆ. ಜಾಗತಿಕವಾಗಿ ಚೀನಾವು 76.00 ಸುರಕ್ಷತಾ ಅಂಕಗಳೊಂದಿಗೆ 15ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಜತೆಗೆ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ 59ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ 65ನೇ ಸ್ಥಾನ ಮತ್ತು ಬಾಂಗ್ಲಾದೇಶ 126ನೇಯ ಸ್ಥಾನದಲ್ಲಿದೆ.

ಅತ್ಯಂತ ಸುರಕ್ಷಿತ ನಂ.1 ದೇಶ ಅಂಡೋರಾ

ಈ ವರ್ಷದ ಜಾಗತಿಕ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿರುವ ಯುರೋಪ್​ನ ಪುಟ್ಟ ರಾಷ್ಟ್ರವಾದ ಅಂಡೋರಾ, 84.7 ಸುರಕ್ಷತಾ ಅಂಕಗಳೊಂದಿಗೆ "2025 ರ ವಿಶ್ವದ ಸುರಕ್ಷಿತ ದೇಶ" ಎಂಬ ಕಿರೀಟವನ್ನು ಪಡೆದುಕೊಂಡಿದೆ. ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ಪೈರಿನೀಸ್ ಪರ್ವತಗಳಲ್ಲಿ ನೆಲೆಗೊಂಡಿರುವ ಅಂಡೋರಾ, ಅಸಾಧಾರಣವಾಗಿ ಕಡಿಮೆ ಅಪರಾಧ ಸಂಖ್ಯೆಗಳು ಮತ್ತು ಸಾರ್ವಜನಿಕ ಭದ್ರತೆಗಾಗಿ ಹೆಚ್ಚಿನ ಅಂಕಗಳನ್ನು ಗಳಿಸಿದೆ.

ಟಾಪ್ 10 ಸುರಕ್ಷಿತ ದೇಶಗಳು..

1. ಅಂಡೋರಾ - 84.7

2. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) - 84.5

3. ಕತಾರ್ - 84.2

4. ತೈವಾನ್ - 82.9

5. ಓಮನ್ - 81.7

6. ಐಲ್ ಆಫ್ ಮ್ಯಾನ್ (ಬ್ರಿಟಿಷ್ ಕ್ರೌನ್ ಅವಲಂಬನೆ) - 79.0

7. ಹಾಂಗ್ ಕಾಂಗ್ (ಚೀನಾ) - 78.5

8. ಅರ್ಮೇನಿಯಾ - 77.9

9. ಸಿಂಗಾಪುರ - 77.4

10. ಜಪಾನ್ - 77.1

ಅತ್ಯಂತ ಕಡಿಮೆ ಸುರಕ್ಷಿತ ದೇಶ ವೆನೆಜುವೆಲಾ:

ಶ್ರೇಯಾಂಕದ ಇನ್ನೊಂದು ತುದಿಯಲ್ಲಿ, ವೆನೆಜುವೆಲಾ ಅತ್ಯಂತ ಕಡಿಮೆ ಸುರಕ್ಷಿತ ದೇಶವೆಂದು ಹೆಸರಿಸಲ್ಪಟ್ಟಿದ್ದು, ಕೇವಲ 19.3 ಸುರಕ್ಷತಾ ಅಂಕಗಳನ್ನು ಗಳಿಸಿದೆ. ಸಂಘರ್ಷ, ರಾಜಕೀಯ ಪ್ರಕ್ಷುಬ್ಧತೆ ಮತ್ತು ಹೆಚ್ಚಿನ ಅಪರಾಧಗಳಿಂದ ಬಳಲುತ್ತಿರುವ ಅಫ್ಘಾನಿಸ್ತಾನ, ಸಿರಿಯಾದಂತಹ ದೇಶಗಳು ಕೆಳಗಿನ ಸ್ಥಾನಗಳನ್ನು ಪಡೆದಿವೆ.(ಏಜೆನ್ಸೀಸ್​)