ನ್ಯೂಸ್

ಭಾರತ ಮೂಲದ Swiss Billionaire​ ಮಗಳಿಗೆ ಉಗಾಂಡದಲ್ಲಿ ನರಕ ದರ್ಶನ; ಸಹಾಯಕ್ಕಾಗಿ ಅಂಚಲಾಗುತ್ತಿರುವ ಆಡಿಯೋ ವೈರಲ್​

ಉಗಾಂಡ: ಭಾರತ ಮೂಲದ ಸ್ವಿಸ್​ ಉದ್ಯಮಿ (Swiss Billionaires) ಪಂಕಜ್​ ಓಸ್ವಾಲ್​ (Pankaj Oswal) ಅವರ ಪುತ್ರಿ ವಸುಂಧರಾರನ್ನು (Vasundhara Oswal) ಅಕ್ಟೋಬರ್​ 01ರಂದು ಉಗಾಂಡದಲ್ಲಿ ಅಕ್ರಮವಾಗಿ ಬಂಧಿಸಲಾಗಿದ್ದು, ಈ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೀಗ ಓಸ್ವಾಲ್​ ಕುಟುಂಬಸ್ಥರು ತಮ್ಮ ಪುತ್ರಿ ಮಾತನಾಡಿರುವ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಉಗಾಂಡದಲ್ಲಿ ತಮ್ಮ ಮಗಳು ಅನುಭವಿಸುತ್ತಿರುವ ನರಕದಿಂದ ಮುಕ್ತಿ ಕೊಡಿಸುವಂತೆ ವಿಶ್ವಸಂಸ್ಥೆಗೆ ಆಗ್ರಹಿಸಿದ್ದಾರೆ.

ಉಗಾಂಡದ ತಾಂಜೇನಿಯಾ ಮೂಲದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಆರೋಪದ ಮೇಲೆ ವಸುಂಧರಾ ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕುಟುಂಬಸ್ಥರು ಹೇಳಿರುವ ಪ್ರಕಾರ ಯಾವ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಆತ ಜೀವಂತವಾಗಿಯೇ ಇದ್ದಾನೆ. ಇದಕ್ಕೆ ಬೇಕಾದ ದಾಖಲೆಗಳು ಹಾಗೂ ವಿಡಿಯೋಗಳು ನಮ್ಮ ಬಳಿ ಇವೆ ಎಂದು ಓಸ್ವಾಲ್​ ಕುಟುಂಬಸ್ಥರು (Oswal Family) ಹೇಳಿದ್ದಾರೆ. ಆದರೆ, ಯಾವ ಕಾರಣದ ಮೇಲೆ ಬಂಧಿಸಿ ಹಿಂಸೆ ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ವಸುಂಧರಾ ಓಸ್ವಾಲ್​ (Vasundhara Oswal) ತಾಂಜೇನಿಯಾದಲ್ಲಿ ಫ್ಯಾಕ್ಟರಿ ಒಂದನ್ನು ನಿರ್ಮಿಸಿದ್ದು, 400ಕ್ಕೂ ಹೆಚ್ಚು ಕುಟುಂಬಗಳಿಗೆ ಆಧಾರವಾಗಿದ್ದಾಳೆ. ಬಂಜರು ಭೂಮಿಯನ್ನು ಆಕೆ ಅಭಿವೃದ್ಧಿ ಪಡಿಸಿದ್ದು, ಆಕೆಯನ್ನು ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಅಲ್ಲಿನ ಅಧಿಕಾರಿಗಳು ಆಕೆಯನ್ನು ಬಿಡುಗಡೆ ಮಾಡಲು ಭಾರೀ ಮೊತ್ತದ ಲಂಚವನ್ನು ಕೇಳುತ್ತಿದ್ದು, ಇದು ದುಡ್ಡು ಹೊಡೆಯುವ ದೊಡ್ಡ ಹುನ್ನಾರವಾಗಿದೆ. ಕಳೆದ 68 ವರ್ಷಗಳಿಂದ ಉಗಾಂಡದಲ್ಲಿರುವ ನಮ್ಮ ವೈರಿಗಳು ತಮಗಿರುವ ಶಕ್ತಿಯನ್ನು ಉಪಯೋಗಿಸಿಕೊಂಡು ವಸುಂಧರಾಳನ್ನು ಅರೆಸ್ಟ್​ ಮಾಡಿಸಿದ್ದಾರೆ ಎಂದು ಓಸ್ವಾಲ್​ ಕುಟುಂಬಸ್ಥರು ಆರೋಪಿಸಿದ್ದಾರೆ.

; ಓರ್ವ ಯುವತಿಗೆ ಆಕೆಗೆ ಬೇಕಾದ ಕನಿಷ್ಟ ಮೂಲ ಸೌಕರ್ಯವನ್ನೂ ನೀಡಿಲ್ಲ ಎಂದು ಓಸ್ವಾಲ್ ಪರಿವಾರ ಆಕ್ರೋಶ ವ್ಯಕ್ತಪಡಿಸಿದೆ. ಆಕೆಗೆ ಸರಿಯಾಗಿ ಆಹಾರ ಹಾಗೂ ನೀರನ್ನೂ ಕೊಟ್ಟಿಲ್. ಒಂದು ಪುಟ್ಟ ಟೇಬಲ್ ಮೇಲೆ ಮಲಗಲು ಅವಕಾಶ ನೀಡಲಾಗಿದೆ. ಆಗಾಗ ಶಂಕಿತರ ಪರೇಡ್‌ನಲ್ಲಿ ಭಾಗಿಯಾಗುವಂತೆ ಒತ್ತಾಯ ಮಾಡಲಾಗುತ್ತಿದೆ. ಆಕೆ ಸಸ್ಯಾಹಾರಿಯಾಗಿದ್ದು, ಆಕೆಗೆ ಸೂಕ್ತ ಆಹಾರವನ್ನೂ ನೀಡಿಲ್ಲ ಎಂದು ಓಸ್ವಾಲ್ ಪರಿವಾರ ಹಾಗೂ ವಕೀಲರು ವಿಶ್ವ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಯಶಸ್ವಿ ಯುವ ಉದ್ಯಮಿ ವಿರುದ್ಧ ದ್ವೇಷ ಸಾಧನೆ?

ತನ್ನ ಸಹೋದರಿಯ ಸಂಕಷ್ಟದ ಸನ್ನಿವೇಶದ ಕುರಿತಾಗಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಆಕೆಯ ಸಹೋದರ ವಿವರಿಸಿದ್ದಾರೆ. ನನ್ನ ಸಹೋದರಿ ವಸುಂಧರಾ ಅತ್ಯಂತ ಶ್ರಮ ವಹಿಸಿ ಕೆಲಸ ಮಾಡುತ್ತಾಳೆ. ಉಗಾಂಡಾದ ಲುವೆರೊ ಎಂಬಲ್ಲಿ ಬಂಜರು ಭೂಮಿಯಲ್ಲಿ 2021ರಲ್ಲಿ ಸಣ್ಣದೊಂದು ಟೆಂಟ್ ಹಾಕಿಕೊಂಡು ತನ್ನ ಉದ್ಯಮ ಆರಂಭಿಸಿದ ವಸುಂಧರಾ ಇಂದು 110 ಮಿಲಿಯನ್ ಡಾಲರ್ ಮೌಲ್ಯದ ಇಎನ್‌ಎ ಕೈಗಾರಿಕಾ ಘಟಕವನ್ನು ಅಭಿವೃದ್ದಿಪಡಿಸಿದ್ದಾಳೆ. ಆಕೆಯ ಈ ಪರಿಶ್ರಮ ಹಾಗೂ ಏಳಿಗೆಯನ್ನು ಸಹಿಸದೆ ಕೆಲವರು ಆಕೆಯ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ. ಅದರಲ್ಲೂ 68 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಆಕೆಯಿಂದ ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದಾನೆ. ಆಕೆಯ ಘನತೆಯನ್ನು ಕುಗ್ಗಿಸಲು ಯತ್ನಿಸುತ್ತಿದ್ದಾನೆ ಎಂದು ಆರೋಪ ಮಾಡಲಾಗಿದೆ. ಆದರೆ, 68 ವರ್ಷ ವಯಸ್ಸಿನ ವ್ಯಕ್ತಿ ಯಾರು ಎಂದು ವಿವರಿಸಿಲ್ಲ.