ಗೋವಾ: ಭಾರತವು ನಕ್ಸಲಿಸಂ-ಮಾವೋವಾದಿ ಭಯೋತ್ಪಾದನೆಯನ್ನು (Naxal terrorism) ನಿರ್ಮೂಲನೆ ಮಾಡುವ ಹಾದಿಯಲ್ಲಿದೆ. ಅಲ್ಲದೆ, ಈ ವರ್ಷ ದೀಪಾವಳಿಯನ್ನು ಘನತೆಯಿಂದ ಆಚರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಅಕ್ಟೋಬರ್,20) ಹೇಳಿದ್ದಾರೆ.
ಈ ಬಗ್ಗೆ ಗೋವಾ ಕರಾವಳಿಯಲ್ಲಿ ಐಎನ್ಎಸ್ ವಿಕ್ರಾಂತ್ ನಲ್ಲಿ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭದ್ರತಾ ಪಡೆಗಳ ಶೌರ್ಯವನ್ನು ಶ್ಲಾಘಿಸಿದ್ದಾರೆ. ದೇಶವು ಮಾವೋವಾದಿ ಭಯೋತ್ಪಾದನೆಯ ವಿರುದ್ಧ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಒಂದು ದಶಕದ ಹಿಂದೆ 125 ಜಿಲ್ಲೆಗಳಿದ್ದ ನಕ್ಸಲರು ಈಗ ಕೇವಲ 11 ಜಿಲ್ಲೆಗಳಿಗೆ ಇಳಿದಿದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿ, ನಮ್ಮ ಭದ್ರತಾ ಪಡೆಗಳ ಶೌರ್ಯ ಮತ್ತು ಧೈರ್ಯದಿಂದಾಗಿ ದೇಶವು ಕಳೆದ ಕೆಲವು ವರ್ಷಗಳಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ದಾಟಿದೆ. ಈ ಮೈಲಿಗಲ್ಲು ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಬಗ್ಗೆಯಾಗಿದೆ. ಈಗ ದೇಶವು ನಕ್ಸಲೀಯ-ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತವಾಗುವ ಅಂಚಿನಲ್ಲಿದೆ ಎಂದು ಪ್ರಧಾನಿ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, 2014 ಕ್ಕಿಂತ ಮೊದಲು ದೇಶಾದ್ಯಂತ ಸುಮಾರು 125 ಜಿಲ್ಲೆಗಳು ಮಾವೋವಾದಿ ಹಿಡಿತದಲ್ಲಿದ್ದವು. ಅದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ತೆಗೆದುಕೊಂಡ ಕ್ರಮಗಳಿಂದಾಗಿ ಈ ಸಂಖ್ಯೆ ಈಗ ಕೇವಲ 11 ಜಿಲ್ಲೆಗಳಿಗೆ ಇಳಿದಿದೆ. ಈ 11 ಜಿಲ್ಲೆಗಳಲ್ಲಿ, ಕೇವಲ ಮೂರು ಜಿಲ್ಲೆಗಳು ಮಾತ್ರ ಮಾವೋವಾದಿಗಳ ಪ್ರಭಾವದಲ್ಲಿವೆ ಎಂದು ಮೋದಿ ತಿಳಿಸಿದ್ದಾರೆ.
100 ಕ್ಕೂ ಹೆಚ್ಚು ಜಿಲ್ಲೆಗಳು ಈಗ ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತವಾಗಿವೆ. ದೇಶದಲ್ಲಿ ಮೊದಲ ಬಾರಿಗೆ ನಕ್ಸಲರು ತೆರೆದ ಗಾಳಿಯಲ್ಲಿ ಉಸಿರಾಡುತ್ತಿದ್ದಾರೆ ಮತ್ತು ಅದ್ದೂರಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
ನಮ್ಮ ಸರ್ಕಾರ ಬಂ ನಂತರ ಮಾವೋವಾದಿಗಳು ಶಾಲೆಗಳು, ರಸ್ತೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ಅವಕಾಶ ನೀಡದ ಪ್ರದೇಶಗಳಲ್ಲಿ ಈಗ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ವ್ಯವಹಾರಗಳು ಬೇರೂರುತ್ತಿವೆ, ಶಾಲೆಗಳು ಮತ್ತು ಆಸ್ಪತ್ರೆಗಳು ಮಕ್ಕಳಿಗೆ ಹೊಸ ಭವಿಷ್ಯವನ್ನು ನಿರ್ಮಿಸುತ್ತಿವೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಭದ್ರತಾ ಪಡೆಗಳ ತಪಸ್ಸು, ತ್ಯಾಗ ಮತ್ತು ಧೈರ್ಯದಿಂದಾಗಿ ಈ ವಿಜಯಗಳು ಸಾಧ್ಯವಾಯಿತು. ದೇಶದ ಇಂತಹ ಜಿಲ್ಲೆಗಳ ಜನರು ಮೊದಲ ಬಾರಿಗೆ ಹೆಮ್ಮೆ, ಗೌರವ ಮತ್ತು ಘನತೆಯಿಂದ ದೀಪಾವಳಿಯನ್ನು ಆಚರಿಸಲಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದು ಮೋದಿ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದಾರೆ. (ಏಜೆನ್ಸೀಸ್)