Gold , Silver Wedding Card : ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬುದು ಒಂದು ಅದ್ಭುತ ಕ್ಷಣ. ಮದುವೆ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಗಳು ಹೆಚ್ಚು ಮಹತ್ವ ಹೊಂದಿವೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಕಾಗದ ರೂಪದ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಆದರೆ ಉತ್ತರ ಪ್ರದೇಶದ ಫಿರೋಜಾಬಾದ್ನ ಬಿಲಿಯನರ್ ಒಬ್ಬ ಮಗಳ ಆಮಂತ್ರಣ ಪತ್ರಿಕೆಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿರುವುದು ಎಲ್ಲರ ಬೇರಗಾಗುವಂತೆ ಮಾಡಿದೆ.
ಫಿರೋಜಾಬಾದ್ನ ಆಗ್ರಾ ಗೇಟ್ನಲ್ಲಿ ಲಾಲಾ ರವೀಂದ್ರನಾಥ್ ಕನ್ಹಯ್ಯ ಲಾಲ್ ಸರಾಫಾ ಅಂಗಡಿಯೊಂದನ್ನು ನಡೆಸುತ್ತಾರೆ. ಇವರು ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಯೋಚಿಸಿದ್ದರು. ಹೀಗಾಗಿ ಹೊಸ ಆಲೋಚನೆಯೊಂದಿಗೆ ಲಗ್ನಪತ್ರಿಕೆಯನ್ನು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿಸಿದ್ದಾರೆ.
ಆದರೆ ವಿವಾಹದ ಸಂದರ್ಭದಲ್ಲಿ ಮೊದಲ ಮದುವೆ ಆಮಂತ್ರಣ ವರನಿಗೆ ನೀಡುತ್ತಾರೆ. ನಂತರ ಅದನ್ನು ಹರಿದು ಹಾಕುತ್ತಾರೆ. ಆಮಂತ್ರಣ ಪತ್ರಿಕೆಯು ಬಹಳ ಮಹತ್ವದ್ದಾಗಿದೆ. ಅದನ್ನು ಯಾವಾಗಲೂ ಜೋಪಾನವಾಗಿ ನೋಡಿಕೊಳ್ಳಬೇಕು. ಹರಿದರೆ ಅದು ಅಶುಭವಾಗುತ್ತದೆ ಎಂದು ಅರಿತು ತಮ್ಮ ಮಗಳ ಮದುವೆಗೆ ವಿಭಿನ್ನವಾಗಿ ಎಂದೂ ಮರೆಯದಂತೆ ಗೌರವವಾಗಿ ನೋಡಿಕೊಳ್ಳುವ ಆಮಂತ್ರಣ ಪತ್ರಿಕೆ ಮಾಡಿಸಬೇಕು ಎಂದು ಆಲೋಚಿಸಿ ಹೀಗೆ ಮಾಡಿಸಿದ್ದೇನೆಂದು ವಧುವಿನ ತಂದೆ ಹೇಳಿದ್ದಾರೆ.
ಬೆರಗುಗೊಳಿಸುವಂತ ಸುಂದರ ಆಮಂತ್ರಣ ಪತ್ರಿಕೆ ತಯಾರಿಸಲು ಆರಂಭಿಸುತ್ತಾರೆ. ಈ ಪತ್ರಿಕೆಯು ಆಕರ್ಷಕ ವಿನ್ಯಾಸ ಹೊಂದಿದ್ದು, ಚಿನ್ನ ಮತ್ತು ಬೆಳ್ಳಿಯಿಂದ ಅಕ್ಷರಗಳನ್ನು ಇದರಲ್ಲಿ ಬಿಡಿಸಲಾಗಿದೆ ಎಂದು ವರದಿಯಾಗಿದೆ.
ಮೊದಲ ಬಾರಿಗೆ ಇಂತಹ ಆಮಂತ್ರಣ ಪತ್ರಿಕೆಯನ್ನು ತಯಾರಿಸಲಾಗಿದ್ದು, ಇದರ ಚೌಕಟ್ಟನ್ನು ಅಮೂಲ್ಯವಾದ ಲೋಹಗಳಿಂದ ಒಳಗೊಂಡಿದೆ. ಇದರ ಮೌಲ್ಯ 11 ಲಕ್ಷ ರೂ. ಆಗಿದ್ದು ಇದು ಭಾರತದಲ್ಲೇ ಮೊದಲ ಬಾರಿಗೆ ತಯಾರಿಸಲಾದ ಅತ್ಯಂತ ದುಬಾರಿ ಪತ್ರಿಕೆಯಾಗಿದೆ.
ಸಾಂಪ್ರದಾಯಿಕವಾಗಿ ಪ್ರತಿಯೊಬ್ಬರಿಗೆ ಇಂತಹ ಆಕರ್ಷಕ ಆಮಂತ್ರಣ ಪತ್ರಿಕೆಯನ್ನು ತಯಾರಿಸಲು ಅವಕಾಶ ನೀಡಲಾಗಿದ್ದು, ಲಕ್ಕಿ ಜಿಂದಾಲ್ ಅಂಗಡಿಯು ಕಡಿಮೆ ಬೆಲೆಗೆ ಅಂದರೇ 10,000 ರೂ. ದಿಂದ 11 ಲಕ್ಷ ರೂ ವರೆಗೆ ಆಕರ್ಷಕ ಆಮಂತ್ರಣ ಪತ್ರಿಕೆ ಮಾಡಿಕೋಡಲು ಮುಂದಾಗಿದೆ.