ಹಣದುಬ್ಬರ ಮತ್ತು ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನ ಹೊರತಾಗಿಯೂ 2022ರ ಆರಂಭದಿಂದಲೂ 3ನೇ ತೆಮಾಸಿಕದಲ್ಲಿ ಶೇ. 30 ಏರಿಕೆಯಾಗಿದೆ. ಹಬ್ಬದ ಋತು ಭಾರತದ ದಾಖಲೆ ಏರಿಕೆಗೆ ಕಾರಣವಾಗಿದೆ. ಭಾರತದ ಬ್ರ್ಯಾಂಡ್ಗಳು ಕೈಗೆಟಕುವ ಬೆಲೆಯಲ್ಲಿ ಈ ಉತ್ಪನ್ನಗಳನ್ನು ನೀಡುತ್ತಿರುವುದೂ ಮಾರ್ಕೆಟ್ ವಿಸ್ತರಣೆಗೆ ಅವಕಾಶವಾಗಿದೆ.
* ಆ್ಯಪಲ್ನ ಹೊಸದಾಗಿ ಬಿಡುಗಡೆಯಾದ ಆ್ಯಪಲ್ ವಾಚ್ 8 ಸರಣಿ ಭರ್ಜರಿ ಮಾರಾಟದಿಂದಾಗಿ ಆ್ಯಪಲ್ ಬೆಳವಣಿಗೆ ಶೇಕಡ 48ರಷ್ಟು (ವೈ&ಓ&ವೈ) ಬೆಳವಣಿಗೆ ದಾಖಲಿಸಿದೆ.
* ನಾಯ್ಸ್ ಸ್ಮಾರ್ಟ್ವಾಚ್ 218% ದಾಖಲಿಸಿದ ಬೆಳವಣಿಗೆ. ಈ ಮೂಲಕ ಅದು ಭಾರತದ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆದಿದೆ. ೈರ್&ಬೋಲ್ಟ್ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ.
* ನೂತನ ಗ್ಯಾಲಕ್ಸಿ ವಾಚ್ 5 ಸರಣಿ ಮೂಲಕ ಸ್ಯಾಮ್ಸಂಗ್
ಸ್ಮಾರ್ಟ್ವಾಚ್ ಮಾರಾಟ ಶೇ. 62ರಷ್ಟು ಹೆಚ್ಚಿಸಿಕೊಂಡಿದೆ.
* ತುಲನಾತ್ಮಕವಾಗಿ ಕಡಿಮೆ ಭಾರದ ಆಪರೇಷನ್ ಸಿಸ್ಟಮ್ಸ್ (ಓಎಸ್) ಹಾಗೂ ಕೈಗೆಟಕುವ ದರದ ವಾಚ್ಗಳು ಅಧಿಕ ಬೇಡಿಕೆ ಹೊಂದಿವೆ.
ವಾರ್ಷಿಕ ಹೋಲಿಕೆಯಲ್ಲಿ ಈ ವರ್ಷ ಭಾರತದ ಸ್ಮಾರ್ಟ್ ವಾಚ್ ಮಾರುಕಟ್ಟೆ ಶೇಕಡ 171 ಬೆಳವಣಿಗೆ ಕಂಡಿದೆ. 2022ರ 3ನೇ ತೆಮಾಸಿಕದಲ್ಲಿ ಅದು ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ ವಾಚ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಕೌಂಟರ್ಪಾಯಿಂಟ್ ರೀಸರ್ಚ್ನ ಹಿರಿಯ ವಿಶ್ಲೇಷಕಿ ಅಂಶಿಕಾ ಜೈನ್ ಹೇಳಿದ್ದಾರೆ.