ರಾಜಸ್ತಾನ ಶಾಂತಿವನದ ಡೈಮಂಡ್ ಹಾಲ್ ನಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್ ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್ ಸಿ ಎಸ್.ರುದ್ರೇಗೌಡ, ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ರಾಜಯೋಗಿಗಳಾದ ಚಕ್ರದಾರಾ ದಿದಿ, ಕರುಣ ದಿದಿ, ಸುದೇಶ್ ದಿದಿ ಇದ್ದರು. 
ನ್ಯೂಸ್

ಭಾರತ ಸುಸ್ಥಿರ ಭವಿಷ್ಯವನ್ನು ಪ್ರೇರೇಪಿಸುತ್ತದೆ

ಶಿವಮೊಗ್ಗ: ಏಕತೆ ಮತ್ತು ನಂಬಿಕೆಯು ಜಾಗತಿಕ ಮಟ್ಟದಲ್ಲಿ ಭಾರತದ ಸುಸ್ಥಿರ ಭವಿಷ್ಯವನ್ನು ಪ್ರೇರೇಪಿಸುತ್ತದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ರಾಜಸ್ತಾನದ ಬ್ರಹ್ಮ ಕುಮಾರಿಯರ ಶಾಂತಿವನದ ಡೈಮಂಡ್‌ಹಾಲ್‌ನಲ್ಲಿ ಏರ್ಪಡಿಸಿದ್ದ ಒಗ್ಗಟ್ಟು ಮತ್ತು ನಂಬಿಕೆ ಕುರಿತ ಜಾಗತಿಕ ಸಮಾವೇಶದಲ್ಲಿ ಆರ್ಥಿಕ ಮತ್ತು ಪರಿಸರ ಹಿತಾಸಕ್ತಿಗಳ ಸಮತೋಲನ ಕುರಿತು ಮಾತನಾಡಿದ ಅವರು, ದೇಶದ ಪ್ರಗತಿಗೆ ಆರ್ಥಿಕತೆ ಎಂಬುದು ಇಂಜಿನ್ ಇದ್ದಂತೆ. ಬಹಳ ಸಮಯದಿಂದ ಆರ್ಥಿಕತೆ ಮತ್ತು ಪರಿಸರವನ್ನು ಒಂದೇ ವಲಯದಲ್ಲಿವೆ. ಇವೆರಡು ಪ್ರತಿಸ್ಪರ್ಧಿಗಳಲ್ಲ. ವಾಸ್ತವವಾಗಿ ಪಾಲುದಾರರಾಗಿದ್ದಾರೆ. ಹಾಗಾಗಿ ಎರಡನ್ನೂ ಸಮಾನವಾಗಿ ಪರಿಗಣಿಸಬೇಕಿದೆ ಎಂದರು.

ರಾಜಯೋಗದ ಪರಿಶುದ್ಧತೆ ಮತ್ತು ಶಕ್ತಿಯ ಮೂಲಕ ಜಗತ್ತನ್ನು ಪರಿವರ್ತಿಸುತ್ತಿರುವ ಸಾವಿರಾರು ಬ್ರಹ್ಮಕುಮಾರಿ ಸಹೋದರಿಯರ ದಣಿವರಿಯದ ಸೇವೆಯು ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಸಾಮರಸ್ಯದ ಮೌಲ್ಯಗಳನ್ನು ಪೋಷಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪತ್ರಕರ್ತೆ ಮೀನಾಕ್ಷಿ ಜೋಶಿ ಮಾತನಾಡಿ, ನಂಬಿಕೆ ಮತ್ತು ಒಗ್ಗಟ್ಟಿನ ಮೇಲೆ ದೇಶದ ಇತಿಹಾಸ ನಿಂತಿದೆ. ದೇಶದ ಗಡಿರೇಖೆ ಸದೃಢವಾಗಿದ್ದರೆ ಒಗ್ಗಟ್ಟಿನ ಸೂತ್ರ ಬಲಿಷ್ಠವಾಗಿರಲಿದೆ. ಆದರೆ ಆಧ್ಯಾತ್ಮ ದ ಸೂತ್ರವು ಒಗ್ಗಟ್ಟಿನ ಮಂತ್ರದ ಮೇಲೆ ಅವಲಂಬಿತವಾಗಿದೆ ಎಂದರು.

ನಮ್ಮ ಆತ್ಮವು ಪರಿಶುದ್ಧವಾಗಿರಬೇಕು. ಬ್ರಹ್ಮಕುಮಾರಿ ಪರಿವಾರದ ಜತೆ ಈಶ್ವರ ನೆಲೆಸಿದ್ದಾನೆ. ಯೋಗದಿಂದ ಸರದವ ರೋಗಗಳೂ ಮುಕ್ತವಾಗಲಿವೆ. ರಾಜಯೋಗ ಪ್ರಾಪ್ತವಾಗಲಿದೆ. ನಮ್ಮ ಮನಸ್ಸು ಸುಸ್ಥಿರತೆಯಿಂದ ಇರಬೇಕಾದರೆ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ಜರ್ಮನಿಯ ಪರಿಸರವಾದಿ ಜೊಲೊ ಜೆ.ಪಿಲ್ಜಾ, ಪತ್ರಕರ್ತೆ ದೀಪ್ತಿ ಕೊಟಾರಿ ಮಾತನಾಡಿದರು. ರಾಜಯೋಗಿಗಳಾದ ಚಕ್ರದಾರಾ ದಿದಿ, ಕರುಣಾ ದಿದಿ, ಸುದೇಶ್ ದಿದಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ನೇಪಾಳದ ಗಾಯಕ ಆನಂದ ಕರ್ಕಿ, ಆಕಾಶ ಚೌರಾಸ್ಯ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಬ್ರಹ್ಮ ಕುಮಾರಿಯರಾದ ಶಿವಮೊಗ್ಗದ ಅನುಸೂಯಾ, ಶಿಕಾರಿಪುರದ ಸ್ನೇಹಾ ಮತ್ತಿತರರು ಉಪಸ್ಥಿತರಿದ್ದರು.