Gold: ಪ್ರಸ್ತುತ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಈಗಾಗಲೇ 1 ಲಕ್ಷ ರೂ. ಗಡಿದಾಟಿ ಮುನ್ನುಗ್ಗುತ್ತಿರುವ ಚಿನ್ನ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅನಿಶ್ಚಿತತೆಯಿಂದಾಗಿ, ದಾಖಲೆ ಹಂತವನ್ನು ತಲುಪುತ್ತಿದೆ. ಬೆಲೆಗಳಲ್ಲಿ ಭಾರಿ ಏರಿಕೆಯ ಹೊರತಾಗಿಯೂ, ಭಾರತದಲ್ಲಿ ಚಿನ್ನದ ಖರೀದಿ ಪ್ರವೃತ್ತಿ ಎಂದಿನಂತೆ ಮುಂದುವರೆದಿದೆ. ಚಿನ್ನಕ್ಕಿರುವ ಬೇಡಿಕೆ ಕಿಂಚಿತ್ತು ಇಳಿಯುವುದಿಲ್ಲ ಎಂಬ ಮಾತು ದಿಟವಾಗಿದೆ.
ಇದನ್ನೂ ಓದಿ: ಹುಟ್ಟುಹಬ್ಬದಂದೇ ತನ್ನಿಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ತಂದೆ ಕೊನೆಗೂ ಅರೆಸ್ಟ್: ಕೊಲೆಯ ಕಾರಣ ಬಹಿರಂಗ! Mylavaram Crime
ದಾಖಲೆಯ ಬೆಲೆಗಳ ಹೊರತಾಗಿಯೂ, ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ 782 ಟನ್‌ಗಳನ್ನು ತಲುಪಿದೆ. ಇದು ಕೊರೊನಾ ಪೂರ್ವದ ಸರಾಸರಿಗಿಂತ ಶೇ.15ರಷ್ಟು ಹೆಚ್ಚಾಗಿದೆ. ಆಭರಣಗಳ ಬೇಡಿಕೆ ಕೊಂಚ ಕುಸಿದಿದ್ದರೂ, ಚಿನ್ನದ ಗಟ್ಟಿಗಳು ಮತ್ತು ನಾಣ್ಯಗಳಲ್ಲಿ ಹೂಡಿಕೆ ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಚಿಲ್ಲರೆ ಹೂಡಿಕೆದಾರರು ಇದರಲ್ಲಿ ಮಾಡಿದ ಹೂಡಿಕೆಗಳ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇ.25ರಷ್ಟು ಹೆಚ್ಚಾಗಿದೆ.
ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬೇಡಿಕೆ ಸುಮಾರು 725 ಟನ್‌ಗಳಾಗಿರುತ್ತದೆ ಎಂದು ಯುಬಿಎಸ್ ಅಂದಾಜಿಸಿದೆ. ವಿಶ್ವ ಚಿನ್ನ ಮಂಡಳಿ (ಡಬ್ಲ್ಯೂಜಿಸಿ) ಪ್ರಕಾರ, ದೇಶದಲ್ಲಿ ಚಿನ್ನದ ಹಿಡುವಳಿಗಳು ಹೆಚ್ಚಾಗಿರುವುದು ಗಮನಾರ್ಹ. ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಲ್ಲಿನ ಮನೆಗಳು ಮತ್ತು ದೇವಾಲಯಗಳಲ್ಲಿ ಸುಮಾರು 25,000ಕ್ಕೂ ಅಧಿಕ ಟನ್ ಚಿನ್ನವಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯ ಪ್ರಕಾರ, ಅದರ ಮೌಲ್ಯವು 200 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕಾಗಿ ಪತ್ನಿಗೆ ಚಾಕುವಿನಿಂದ ಇರಿದ ಪತಿ! Instagram reels
ಇನ್ನೂ ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಡಲಾದ ನಾಮಮಾತ್ರ ಡಿಜಿಪಿ ಅಂದಾಜಿನ ಶೇ.56ರಷ್ಟು ಸಮನಾಗಿರುತ್ತದೆ. 2024-2025ರಲ್ಲಿ ಪಾಕಿಸ್ತಾನದ ಒಟ್ಟು ಆರ್ಥಿಕತೆಯು 411 ಡಾಲರ್ ಬಿಲಿಯನ್ (ಸುಮಾರು 34 ಲಕ್ಷ ಕೋಟಿ ರೂ.) ಆಗಿರುತ್ತದೆ ಎಂದು ಐಎಂಎಫ್ ಅಂದಾಜಿಸಿದೆ. ಇದರರ್ಥ ಭಾರತದಲ್ಲಿ ಮನೆಗಳು ಹೊಂದಿರುವ ಚಿನ್ನದ ಮೌಲ್ಯವು ಪಾಕಿಸ್ತಾನದ ಜಿಡಿಪಿಗಿಂತ ಆರು ಪಟ್ಟು ಹೆಚ್ಚಿದೆ. ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ಗೆ ಸನ್ನಿಹಿತ. ಆದಾಗ್ಯೂ, ಚಿನ್ನದ ಖರೀದಿಗಳು ನಿರಂತರವಾಗಿ ಕುಸಿಯುತ್ತಿರುವುದರಿಂದ, 2026ರ ವೇಳೆಗೆ ಚಿನ್ನದ ಬೆಲೆ ಔನ್ಸ್‌ಗೆ (28 ಗ್ರಾಂ) 3,500 ಡಾಲರ್ ತಲುಪುವ ನಿರೀಕ್ಷೆಯಿದೆ,(ಏಜೆನ್ಸೀಸ್).