ನ್ಯೂಸ್

ಅಮೆರಿಕಕ್ಕೆ ಆ. 25 ರಿಂದ 'ಅಂಚೆ ಸೇವೆ' ಸ್ಥಗಿತಗೊಳಿಸಲು ಭಾರತ ನಿರ್ಧಾರ| Postal service

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿರುವ ಹಿನ್ನೆಲೆ, ಭಾರತ ಸರ್ಕಾರದ ಅಂಚೆ ಇಲಾಖೆಯು, ಅಮೆರಿಕಕ್ಕೆ ಎಲ್ಲಾ ರೀತಿಯ ಅಂಚೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಅಂಚೆ ಇಲಾಖೆಯು ಆಗಸ್ಟ್ 25 ರಿಂದ ಅಮೆರಿಕಕ್ಕೆ ಕಳುಹಿಸಲಾದ ಎಲ್ಲಾ ರೀತಿಯ ಅಂಚೆ ವಸ್ತುಗಳ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಈ ಬೆಳವಣಿಗೆಗಳ ಹಿನ್ನೆಲೆ, ಆಗಸ್ಟ್ 25 ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಹೋಗುವ ಎಲ್ಲಾ ಅಂಚೆ ವಸ್ತುಗಳ ಬುಕಿಂಗ್ ಅನ್ನು ಸ್ಥಗಿತಗೊಳಿಸಲು ಇಂಡಿಯಾ ಪೋಸ್ಟ್ ತೀರ್ಮಾನಿಸಿದೆ. ಪತ್ರಗಳು, ದಾಖಲೆಗಳು ಮತ್ತು USD 100 ಮೀರದ ಉಡುಗೊರೆ ಪಾರ್ಸೆಲ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ಸರಕುಗಳ ಬುಕಿಂಗ್‌ ಅನ್ನು ತಾತ್ಕಾಲಿಕವಾಗಿ ಸ್ಥಗಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ. ಇವುಗಳನ್ನು ಮುಂದಿನ ಸೂಚನೆ ಬರುವವರೆಗೂ ಸ್ವೀಕರಿಸಲಾಗುತ್ತದೆ.

ಅಮೆರಿಕಕ್ಕೆ ಕಳುಹಿಸಲಾಗದ ಪಾರ್ಸೆಲ್‌ಗಳನ್ನು ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ಅಂಚೆ ಮರುಪಾವತಿಗೆ ಅರ್ಹರಾಗಿರುತ್ತಾರೆ. ಅಂಚೆ ಇಲಾಖೆಯು ಈ ಅಡಚಣೆಗೆ ವಿಷಾದ ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಸಾಧ್ಯವಾದಷ್ಟು ಬೇಗ ಸೇವೆಗಳನ್ನು ಪುನಃಸ್ಥಾಪಿಸಲು ಸಿಬಿಪಿ, ಯುಎಸ್‌ಪಿಎಸ್ ಮತ್ತು ಇತರ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂಬ ಭರವಸೆ ನೀಡಿದೆ. ಇದು ಅಮೆರಿಕದ ಸುಂಕ ನೀತಿ ಬದಲಾವಣೆಯ ಪರಿಣಾಮಗಳನ್ನು ಒತ್ತಿಹೇಳುತ್ತದೆ. ಇದರಿಂದ ಗಡಿಯಾಚೆಗಿನ ಇ-ಕಾಮರ್ಸ್ ಮತ್ತು ವೈಯಕ್ತಿಕ ಸಾಗಣೆಗಳಿಗೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

(ಏಜೆನ್ಸೀಸ್)