ನ್ಯೂಸ್

ಪಾಕ್​ ವಿಮಾನಗಳಿಗೆ ವಾಯು ಪ್ರದೇಶ ಬಂದ್​ ಮಾಡಿದ ಭಾರತ | Pakistani Flights

Pakistani Flights : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇದೀಗ ಪಾಕಿಸ್ತಾನದ ಎಲ್ಲ ತರಹದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವಂತೆ ಭಾರತ ವಾಯುಪಡೆ (NOTAM) ಗೆ ಬುಧವಾರ ಸೂಚನೆ ನೀಡಿದೆ.

ಈ ಮುಚ್ಚುವಿಕೆಯು ಏಪ್ರಿಲ್ 30 ರಿಂದ ಮೇ 23 ರವರೆಗೆ ಜಾರಿಗೆ ಬರಲಿದೆ, ಕಳೆದ ವಾರ ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಲು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತ್ತು.

ಸಿಂಧೂ ನದಿ ನೀರು ಒಪ್ಪಂದದ ಅಮಾನತು, ಅಟ್ಟಾರಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಮುಚ್ಚುವಿಕೆ, ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಅಮಾನತು ಮತ್ತು ಹೈಕಮಿಷನ್‌ನಲ್ಲಿ ಉನ್ನತ ಅಧಿಕಾರಿಗಳ ಕಡಿತ ಸೇರಿದಂತೆ ಪಾಕಿಸ್ತಾನದ ವಿರುದ್ಧ ಈಗಾಗಲೇ ಘೋಷಿಸಲಾದ ಕ್ರಮಗಳ ಸರಣಿಯಲ್ಲಿ ಈ ಕ್ರಮವು ಸೇರಿದೆ.