ನವದೆಹಲಿ: ಕಳೆದ ವರ್ಷ ನಡೆದಿದ್ದ ಸಿಖ್ ಪ್ರತ್ಯೇಕವಾದಿ ನಾಯಕ, ಖಲಿಸ್ತಾನ ಉಗ್ರ ನಿಜ್ಜರ್ (Nijjar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ (India) ಪಾತ್ರ ಇದೆ ಎಂದು ಕೆನೆಡಾ (Canada) ಆರೋಪಿಸಿರುವ ಬೆನ್ನಲ್ಲೇ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಕೆನೆಡಾದಲ್ಲಿರುವ ಭಾರತದ ಹೈಕಮಿಷನರ್ (High Commissioner) ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು (Officers) ವಾಪಸ್ ಕಡೆಸಿಕೊಂಡಿದೆ.
ಮಹತ್ವದ ಬೆಳವಣಿಗೆಯಲ್ಲಿ ಭಾರತದಲ್ಲಿರುವ (India) ಆರು ಕೆನಡಾ (Canada) ರಾಜತಾಂತ್ರಿಕ ಅಧಿಕಾರಿಗಳನ್ನು ದೇಶದಿಂದ ಹೊರಹಾಕಲು ಸರ್ಕಾರ ನಿರ್ಧರಿಸಿದ್ದು, ಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯುವಂತೆ ಸೂಚಿಸಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಯು ಪ್ರಕಟನೆಯನ್ನು ಹೊರಡಿಸಿದೆ.
ಅದರಂತೆ ಸ್ಟೀವರ್ಟ್ ರಾಸ್ ವೀಲರ್ High Commissioner) , ಪ್ಯಾಟ್ರಿಕ್ ಹೆಬರ್ಟ್ (Deputy High Commissioner), ಮೇರಿ ಕ್ಯಾಥರೀನ್ ಜೋಲಿ (First Secretary) ಲ್ಯಾನ್ ರಾಸ್ ಡೇವಿಡ್ ಟ್ರೈಟ್ಸ್ (First Secretary), ಆಡಮ್ ಜೇಮ್ಸ್ ಚುಪ್ಕಾ (First Secretary) ಪೌಲಾ ಒರ್ಜುಯೆಲಾ (First Secretary) ಈ ಆರು ಅಧಿಕಾರಿಗಳಿಗೆ ಶನಿವಾರದೊಳಗೆ (October 19) ದೇಶ ತೊರೆಯುವಂತೆ ಸೂಚಿಸಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಅವಕಾಶ ನೀಡಿದಂತೆ ಈತನಿಗೂ ಕೊಡಿ; ಬಾಬರ್ ಉಲ್ಲೇಖಿಸಿ ಪಾಕ್ ಪ್ಲೇಯರ್ನ ಟ್ವೀಟ್ ವೈರಲ್
ಸಿಖ್ ಪ್ರತ್ಯೇಕವಾದಿ ನಾಯಕ, ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆಯಲ್ಲಿ (Nijjar Murder) ಭಾರತ (India) ಪಾತ್ರ ವಹಿಸಿದೆ ಎಂದು ಕೆನಡಾ ಸರ್ಕಾರ (Canada Government) ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸಿರುವ ಭಾರತ (India) ಅಲ್ಲಿರುವ ಆರು ರಾಜತಾಂತ್ರಿಕ ಅಧಿಕಾರಿಗಳನ್ನು (Diplomats) ವಾಪಸ್ ಕರೆಸಿಕೊಂಡಿದೆ. ಕೆನಡಾದ (Canada) ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ಭಾರತ (India) ನಮ್ಮವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಕೆನಡಾ ಸರ್ಕಾರದ (Canada Government) ಬದ್ಧತೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದೆ.
ಉಗ್ರವಾದ ಮತ್ತು ಹಿಂಸಾಚಾರದ ವಿಚಾರದಲ್ಲಿ ಕೆನಡಾ ಪ್ರಧಾನಿ ಟ್ರುಡೊ (Trudo) ಸರ್ಕಾರದ ಕ್ರಮಗಳು ಅವರ ಸುರಕ್ಷತೆಗೆ ಅಪಾಯ ಎಂಬುದನ್ನು ಭಾರತ ಒತ್ತಿ ಹೇಳಿದೆ. ನಮ್ಮ ರಾಜತಾಂತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಕೆನಡಾ ಸರ್ಕಾರದ ಬದ್ಧತೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಆದ್ದರಿಂದ, ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಕರೆಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಇಲಾಖೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.