ನ್ಯೂಸ್

ಇಂಡಿಯಾ ಬುಕ್ ಆಫ್ ರೇಕಾರ್ಡ್‌ನಲ್ಲಿ ಶಿವಮೊಗ್ಗದ ‘ಸುಶಾನ್’

ಶಿವಮೊಗ್ಗ: ಆತನಿಗಿನ್ನೂ 3 ವರ್ಷ 2 ತಿಂಗಳು, ಇಂಗ್ಲಿಷ್ ವರ್ಣಮಾಲೆ, ದೇಹದ ಅಂಗಾಗ, ಬಣ್ಣ, ವಾಹನಗಳು, ಗಣ್ಯರ ಹೆಸರು ಹೀಗೆ ಹತ್ತು ಹಲವು ವಸ್ತುಗಳನ್ನು ಗುರುತಿಸಬಲ್ಲ. ಹಿರಿಯರೂ ನಾಚುವಂತಹ ಕಲಿತಾ ಸಾಮರ್ಥ್ಯ ಮತ್ತು ಜ್ಞಾಪಕ ಶಕ್ತಿ ಹೊಂದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಈತನ ಸಾಮರ್ಥ್ಯ ಗುರುತಿಸಿ ಪ್ರಶಂಸೆ ವ್ಯಕ್ತಪಡಿಸಿದೆ. ಅಲ್ಲದೆ, ತನ್ನ ದಾಖಲೆ ಪುಟದಲ್ಲಿ ಆತನ ಹೆಸರನ್ನು ಹಚ್ಚೊತ್ತಿದೆ.
ಇದು ಶಿವಮೊಗ್ಗ ವಿದ್ಯಾನಗರದ ಸುಶಾನ್ ಅವರ ಸಾಧನೆ ಕಿರು ಪರಿಚಯ. ಕೇವಲ 3 ವರ್ಷ 2 ತಿಂಗಳ ಸುಶಾನ್ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾನೆ. ಆತನ ಜ್ಞಾಪನ ಶಕ್ತಿಯನ್ನು ಮನಗಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ ತಮ್ಮ ವೆಬ್‌ಸೈಟ್‌ನಲ್ಲಿ ಬಿತ್ತರಿಸಿದೆ. ಅಲ್ಲದೆ, ಪದಕ ಮತ್ತು ಪಶಸ್ತಿ ಪತ್ರವನ್ನೂ ನೀಡಿದೆ.
ಶಿವಮೊಗ್ಗ ವಿದ್ಯಾನಗರದ ಸುನಿಲ್ ಮತ್ತು ಅನುಷಾ ದಂಪತಿ ಪುತ್ರ ಸುಶಾನ್, 18 ಗಣ್ಯರು, 21 ದೇಹದ ಅಂಗಾಂಗ, 10 ಬಣ್ಣ, 7 ಬಗೆಯ ಹಣ್ಣು, 8 ವಾಹನಗಳು, 5 ಕಾರು, 5 ಬೆರಳಿನ ಹೆಸರನ್ನು ಅರಳು ಹುರಿದಂತೆ ಪಟಪಟನೆ ಹೇಳುತ್ತಾನೆ. ಅಲ್ಲದೆ, ಇಂಗ್ಲೀಷ್ ಅಕ್ಷರಮಾಲೆ ಜತೆಗೆ 1ರಿಂದ 10ಸಂಖ್ಯೆಗಳ ಎಣಿಕೆ, ವಾರದ ಏಳು ದಿನಗಳು, 12 ತಿಂಗಳ ಹೆಸರನ್ನೂ ಹೇಳುತ್ತಾನೆ. ಸಾಮಾನ್ಯಜ್ಞಾನ ವಿಷಯದಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ ಈ ಪೋರನ ಹೆಸರು  ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ  ದಾಖಲಾಗಿದೆ.