ನ್ಯೂಸ್

ಸ್ವಾತಂತ್ರ್ಯ ದಿನಾಚರಣೆ, ತ್ರಿವರ್ಣಮಯಗೊಂಡ ಈಶ ಆದಿಯೋಗಿ

ಚಿಕ್ಕಬಳ್ಳಾಪುರ: ತಾಲೂಕಿನ ಹನುಮಂತಪುರದ ಸಮೀಪವಿರುವ ಈಶ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

112 ಅಡಿ ಎತ್ತರದ ಆದಿಯೋಗಿ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಭಕ್ತ ಸಮೂಹದಿಂದ ತಿವರ್ಣ ಧ್ವಜಗಳು ಹಾರಾಡಿದವು. 

ಇದೇ ವೇಳೆ ಕೊಯಂಬತ್ತೂರಿನ ಧ್ಯಾನ ಕೇಂದ್ರದಲ್ಲಿ ಸದ್ಗುರುಗಳು ರಾಷ್ಟ್ರಧ್ವಜವನ್ನು ಹಾರಿಸಿ, ದೇಶಭಕ್ತಿಯ ದಿವ್ಯ ಸಂದೇಶವನ್ನು ನೀಡಿದರು. 

ರಾಷ್ಟ್ರವು ತನ್ನ ಗುಲಾಮಗಿರಿ ಮಾನಸಿಕತೆಯನ್ನು ಕಳಚಿ ಕೇವಲ ಬದುಕುಳಿಯುವ ಮನೋಭಾವವನ್ನು ಬಿಟ್ಟು ಸಾಗಬೇಕು. ನಾಗರಿಕರು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರವಹಿಸಬೇಕೆಂದು ಕರೆ ನೀಡಿದರು.

ಭಾರತವು ಉದಾರೀಕರಣ ಮೀರಿ ಹೋಗಿ ಶಿಕ್ಷಣ, ಉದ್ಯಮ, ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಬೇಕಾದ ಸಮಯ ಬಂದಿದೆ. ಇದರ ಸಾಕಾರದ ಮೂಲಕ ವ್ಯಕ್ತಿಗತ ಉಪಕ್ರಮವು ಅರಳುವಂತಾಗಬೇಕು. ಮಾನವ ಪ್ರತಿಭೆಯ ಮೇಲೆ ಹೇರಲಾಗಿರುವ ಹಾಗೂ ಕಾಲ್ಪನಿಕವಾಗಿರುವ ಎಲ್ಲಾ ವಿಧದ ಮಿತಿಗಳನ್ನು ಭೇದಿಸಬೇಕಿದೆ. ರಾಷ್ಟ್ರದ ಸತ್ತ್ವವು ಅರಳಲು ಭಾರತೀಯರು ಭವಿಷ್ಯ ಜವಾಬ್ದಾರಿ ಯನ್ನು ಹೊರಬೇಕಾಗಿದೆ ಎಂದರು.‌