ನ್ಯೂಸ್

ಉ.ಪ್ರ ಆರ್​ಎಸ್​ಎಸ್ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ

ಅಲಹಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ಶೈಕ್ಷಣಿಕ ಶಾಖೆ ವಿದ್ಯಾ ಭಾರತಿ ಉತ್ತರ ಪ್ರದೇಶದಲ್ಲಿ ನಡೆಸುವ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಶೇ. 30 ಏರಿಕೆಯಾಗಿದೆ.

ಈ ಶಾಲೆಗಳಲ್ಲಿ ಸುಮಾರು 12,000 ಮುಸ್ಲಿಂ ಮತ್ತು ಕ್ರೖೆಸ್ತ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿದ್ಯಾ ಭಾರತಿಯು ಮುಸ್ಲಿಂ ಶಿಕ್ಷಕರನ್ನು ನೇಮಿಸಿಕೊಂಡಿರುವುದೂ ಇನ್ನೊಂದು ವಿಶೇಷ. ಮುಸ್ಲಿಂ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶ್ಲೋಕ ಹಾಗೂ ‘ಭೋಜನ ಮಂತ್ರ’ಗಳನ್ನು ಪಠಿಸುತ್ತಾರೆ. ಶಿಕ್ಷಣ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿದ್ದಾರೆ ಎಂದು ವಿದ್ಯಾ ಭಾರತಿ ಹಿರಿಯ ಅಧಿಕಾರಿ ಚಿಂತಾಮಣಿ ಸಿಂಗ್ ತಿಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಬೇಕೆಂಬ ಕಾರಣಕ್ಕೆ ನಮ್ಮ ಶಾಲೆಗಳಿಗೆ ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚು ಸೇರುತ್ತಿದ್ದಾರೆ. ಉತ್ತರ ಪ್ರದೇಶದ ವಿದ್ಯಾ ಭಾರತಿ ಶಾಲೆಗಳಲ್ಲಿ ಒಟ್ಟು ಸುಮಾರು ಆರು ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರು.