ನ್ಯೂಸ್

ಮಹಿಳಾ ಪೇದೆಗಳಿಗೆ ಹೇರ್​ಕಟ್​ ಮಾಡುವಂತೆ ಸಲಹೆ ನೀಡುತ್ತಿರುವ ಅಮೂಲ್ಯಾ: ಆಕೆಯ ಸೋಷಿಯಲ್​ ಮೀಡಿಯಾದಲ್ಲಿ ಪಾಕ್​ ಫಾಲೋವರ್ಸ್​ ಹೆಚ್ಚಳ

ಬೆಂಗಳೂರು: ಪಾಕ್​ ಪರ ಘೋಷಣೆ ಕೂಗಿ, ಜೈಲುಪಾಲಾಗಿರುವ ಅಮೂಲ್ಯಾ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾಳೆ. ಬಸವೇಶ್ವರನಗರ ಠಾಣೆಯಲ್ಲಿರುವ ಅಮೂಲ್ಯಾಳನ್ನು ವಿಚಾರಣೆ ನಡೆಸುವುದು ಎಸ್​ಐಟಿ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ತಿನ್ನಲು ಚಿಕನ್​ ಪಾಪ್​ಕಾರ್ನ್​, ಕುಡಿಯಲು ಕಿನ್ಲೆ ಮಿನರಲ್​ ವಾಟರ್​ ಬೇಕು ಎನ್ನುತ್ತಿದ್ದಾಳೆ. ಪೊಲೀಸರು ಏನೇ ಪ್ರಶ್ನೆ ಕೇಳಿದರೂ, ಮೊದಲು ನಾನು ಕೇಳಿದ್ದನ್ನು ತಂದುಕೊಡಿ, ಆಮೇಲೆ ಪ್ರಶ್ನೆ ಮಾಡಿ ಎಂದು ಹೇಳುತ್ತಿದ್ದಾಳೆ.

ಅಷ್ಟೇ ಅಲ್ಲದೆ, ಅಮೂಲ್ಯಾ ಮಹಿಳಾ ಪೊಲೀಸ್​ ಪೇದೆಗಳಿಗೆ ಸಿಕ್ಕಾಪಟೆ ಕಿಚಾಯಿಸುತ್ತಿದ್ದಾಳೆ. ತಲೆಕೂದಲು ಉದ್ದವಾಗಿ ಬಿಟ್ಟು ಜಡೆ ಹಾಕಿಕೊಳ್ಳುವ ಮಹಿಳಾ ಪೇದೆಗಳಿಗೆ ಅಮೂಲ್ಯಾ ಹೇರ್​ಕಟ್​ ಮಾಡುವಂತೆ ಸಲಹೆ ನೀಡುತ್ತಿದ್ದಾಳೆ. ನೀವ್ಯಾಕೆ ನನ್ನ ತರಹನೇ ಕೂದಲು ಕತ್ತರಿಸಿಕೊಳ್ಳಬಾರದು ಎಂದು ಪ್ರಶ್ನೆ ಮಾಡುತ್ತಿದ್ದಾಳೆ. ಇನ್ನು ಅಮೂಲ್ಯಾ ಪಾಕಿಸ್ತಾನ ಪರ ಘೋಷಣೆ ಕೂಗಿದ ನಂತರ ಆಕೆಯ ಫ್ಯಾನ್ಸ್​ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪಾಕಿಸ್ತಾನಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಅಮೂಲ್ಯಾಳ ಫೇಸ್​ಬುಕ್​, ಟ್ವಿಟರ್​ ಅಕೌಂಟ್​ಗಳನ್ನು ಪಾಕ್​ ಪ್ರಜೆಗಳು ಫಾಲೋ ಮಾಡುತ್ತಿದ್ದಾರೆ. ಆಕೆಯ ಪೋಸ್ಟ್​ಗೆ ಪಾಕ್​ ಅಭಿಮಾನಿಗಳು ಲೈಕ್ಸ್​ ನೀಡುತ್ತಿದ್ದಾರೆ. ಅಲ್ಲದೆ, ಪಾಕಿಸ್ತಾನ ಜಿಂದಾಬಾದ್​ ಎಂದು ಕಾಮೆಂಟ್​ಗಳನ್ನು ಬರೆಯುತ್ತಿದ್ದಾರೆ.

ಫೆ.17ರಂದು ಬಿಲಾಲ್​ಬಾಘ್​ನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಫೋಟೋಕ್ಕೆ ಪಾಕಿಸ್ತಾನದ ಮೊರಾದಾಬಾದ್​ನ ಮುಮ್ತಾಜ್​ ಎಂಬಾತ ಪಾಕಿಸ್ತಾನ ಜಿಂದಾಬಾದ್​ ಎಂದು ಕಾಮೆಂಟ್​ ಹಾಕಿದ್ದಾನೆ. (ದಿಗ್ವಿಜಯ ನ್ಯೂಸ್)