ನ್ಯೂಸ್

ಪೊಲೀಸರಿಗೆ ಗುಡ್​ ನ್ಯೂಸ್; ಚುನಾವಣೆ ಕರ್ತವ್ಯ ಭತ್ಯೆ ಹೆಚ್ಚಳ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ವಿಶೇಷ ಭತ್ಯೆ ಮೊತ್ತವನ್ನು ಹೆಚ್ಚಳ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಡಿವೈಎಸ್​ಪಿ ದರ್ಜೆ ಅಧಿಕಾರಿಗೆ ಪ್ರತಿದಿನ 7 ಸಾವಿರ ರೂ

ಡಿವೈಎಸ್​ಪಿ ದರ್ಜೆ ಅಧಿಕಾರಿಗೆ ಪ್ರತಿದಿನ 7 ಸಾವಿರ ರೂ., ಇನ್​ಸ್ಪೆಕ್ಟರ್​ಗೆ 700 ರೂ., ಸಬ್​ಇನ್​ಸ್ಪೆಕ್ಟರ್​ಗೆ 500 ರೂ., ಎಎಸ್​ಐ, ಹೆಡ್​ಕಾನ್​ಸ್ಟೆಬಲ್​, ಕಾನ್​ಸ್ಟೆಬಲ್​ಗೆ 500 ರೂ. ಮತ್ತು ಉಪಹಾರ ಭತ್ಯೆ 250 ರೂ.ಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

2018ರ ಚುನಾವಣೆ ವೇಳೆ ಡಿವೈಎಸ್​ಪಿಗೆ 5 ಸಾವಿರ ರೂ., ಇನ್​ಸ್ಪೆಕ್ಟರ್​ಗೆ 500 ರೂ. ಮತ್ತು ಉಳಿದವರಿಗೆ 350 ರೂ. ಮತ್ತು ಉಪಾಹಾರ ಭತ್ಯೆ 150 ರೂ. ನೀಡಲಾಗುತ್ತಿತ್ತು. ಇದನ್ನು 2023ನೇ ಸಾಲಿನ ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಹೆಚ್ಚಳ ಮಾಡಲಾಗಿದೆ.

ನಿಗದಿತ ಸಮಯದಲ್ಲಿ ಬ್ಯಾಂಕ್​ ಖಾತೆಗೆ ಹಣ ಜಮೆ ಆಗುವಂತೆ ಕ್ರಮ

ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ಸುರತವಾಗಿ ಮತ್ತು ಶಾಂತಿಯುತ ಮತದಾನ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಂಭಾವನೆಯನ್ನು ಪರಿಷ್ಕೃತ ಮಾಡಲಾಗಿದೆ. ಯಾವುದೇ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಪೊಲೀಸರ ಬ್ಯಾಂಕ್​ ಖಾತೆಗೆ ಹಣ ಜಮೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್​ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ.