ಶಿವಮೊಗ್ಗ: ನಗರದ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಬಸವ ನಾಮಾಂಕಿತದ ಪ್ಲೆಟ್ ಬ್ಯಾಂಕ್ ಅನ್ನು ಉದ್ಘಾಟನೆ ಮಾಡಿದರು.
ತಲಾ ಐದು ಸಾವಿರ ಸ್ಟೀಲ್‌ಪ್ಲೇಟ್, ಲೋಟ, ಟೀ ಲೋಟ, ಬೌಲ್ ಅನ್ನು ಒಳಗೊಂಡಿದ್ದು ಎಸ್. ರುದ್ರೆಗೌಡ್ರು ಅಭಿನಂದನಾ ಸಮಿತಿ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಧನಂಜಯ ಸರ್ಜಿ, ಎಂಎಲ್‌ಸಿ ಎಸ್.ರುದ್ರೆಗೌಡ್ರು, ಓಪನ್ ಮೈಂಡ್ ವರ್ಲ್ಡ್ ಸ್ಕೂಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕಿರಣ್‌ಕುಮಾರ್, ಬಸವೇಶ್ವರ ವೀರಶೈವ ಸಮಾಜದ ಪದಾಧಿಕಾರಿಗಳಾದ ಎನ್.ರಾಜಶೇಖರ್, ರುದ್ರೆಶ್, ಬಳ್ಳೆಕೆರೆ ಸಂತೋಷ್, ಮೋಹನ್ ಬಾಳೆಕಾಯಿ, ಅನಿತಾ ರವಿಶಂಕರ್, ರೇಣುಕಾರಾಧ್ಯರು ಉಪಸ್ಥಿತರಿದ್ದರು.