ಭದ್ರಾವತಿ: ಡಾ. ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಭವಾನಿ ಸಂಕೀರ್ಣದಲ್ಲಿ ಅ.14ರಂದು ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಲೋಕೇಶ್ವರ ರಾವ್ ದೊಂಬಾಳೆ ಹೇಳಿದರು.
ತಾಲೂಕಿನಲ್ಲಿ ಮರಾಠ ಸಮಾಜ ಮಾದರಿಯಾಗಿದ್ದು, ಸಮಾಜದವರಿಗೆ ಅನುಕೂಲವಾಗಲು ಸೊಸೈಟಿ ಆರಂಭಿಸಲಾಗುತ್ತಿದೆ. 14ರ ಬೆಳಗ್ಗೆ 11ಕ್ಕೆ ಶಾಸಕ ಬಿ.ಕೆ.ಸಂಗಮೇಶ್ವರ್ ಸೊಸೈಟಿ ಕಚೇರಿ ಉದ್ಘಾಟಿಸುವರು. ಬೆಂಗಳೂರು ಗವಿಪುರ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಗೃಹ ಸಚಿವ ಪಿ.ಜಿ.ಆರ್.ಸಿಂಧ್ಯಾ, ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕ, ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ, ಎಂಎಲ್‌ಸಿಗಳಾದ ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು ಮತ್ತಿತರರು ಭಾಗವಹಿಸುವರು ಎಂದರು.
ಭದ್ರತಾ ಕೊಠಡಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಕ್ಯಾಷ್ ಕೌಂಟರ್ ಅನ್ನು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಉದ್ಘಾಟಿಸುವರು. ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಜಮೀನು ಸಾಲ, ಗೋಲ್ಡ್ ಲೋನ್, ಹಿರಿಯ ನಾಗರಿಕರು, ಮಹಿಳೆಯರು ಇಡುವ ಠೇವಣಿ ಹಣಕ್ಕೆ ಹೆಚ್ಚಿನ ಬಡ್ಡಿದರ ನೀಡುವುದು. ಆರ್‌ಟಿಜಿಎಸ್, ನ್‌ಟೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಸೊಸೈಟಿ ಉಪಾಧ್ಯಕ್ಷ ಆರ್.ನಾಗರಾಜ್‌ರಾವ್ ಸಿಂಘಾಡೆ, ರಾಮಾನಾಥ ವಿ.ಬರ್ಗೆ, ಕೃಷ್ಣೋಜಿರಾವ್ ಗಾಯಕ್‌ವಾಡ್, ಗೀತಾಬಾಯಿ, ಭಾರತಿ ಗಾಯಕ್‌ವಾಡ್, ಬಸಂತರಾವ್ ದಾಳೆ, ಸುರೇಶ್ ಎಸ್.ಬೋಸ್ಲೆ ಇತರರಿದ್ದರು.