ನ್ಯೂಸ್

ಬನ್ನಿಕುಪ್ಪೆಯಲ್ಲಿ ವಿದ್ಯಾರ್ಥಿನಿಲಯ ಉದ್ಘಾಟನೆ

ಬನ್ನಿಕುಪ್ಪೆ: ನೂತನವಾಗಿ 3.65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯವನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಶನಿವಾರ ಉದ್ಘಾಟಿಸಿತು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ್‌ಕುಮಾರ್ ಮಾತನಾಡಿ, ಇಂತಹ ಸುಸರ್ಜಿತ ನೂತನ ಕಟ್ಟಡವು ಹುಣಸೂರಿನಲ್ಲಿ ಎಲ್ಲೂ ಇಲ್ಲ. 5ನೇ ತರಗತಿಯಿಂದ 10ನೇ ತರಗತಿಯವರೆಗೆ 75 ಭಾಗ ಎಸ್‌ಸಿ ಎಸ್‌ಟಿ ಮಕ್ಕಳು, 25 ಭಾಗ ಒಬಿಸಿ ಮಕ್ಕಳು ಪ್ರವೇಶವನ್ನು ಪಡೆದು ವಿದ್ಯಾಭ್ಯಾಸ ಮಾಡಬಹುದು. ವಿದ್ಯಾರ್ಥಿನಿಲಯದಲ್ಲಿ ಎಲ್ಲ ಸೇವಾ ಸೌಲಭ್ಯಗಳು ಹಾಗೂ ಮೂಲ ಸೌಕರ್ಯಗಳು ದೊರೆಯುತ್ತಿದ್ದು, ಅಕ್ಕಪಕ್ಕದ ಗ್ರಾಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ರಾಘವೇಂದ್ರ ಪ್ರಸನ್ನ, ಮೇಲ್ವಿಚಾರಕ ಗಣಪತಿ ಜಕಾತಿ, ಕಟ್ಟಡ ಇಂಜಿನಿಯರ್ ಶಶಿಧರ್, ಸಿಬ್ಬಂದಿ ಹಾಗೂ ಮುಖ್ಯಶಿಕ್ಷಕ ವೆಂಕಟೇಶಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಗ್ರಾಮಸ್ಥರು ಭಾಗವಹಿಸಿದ್ದರು.

ಬನ್ನಿಕುಪ್ಪೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯವನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಶೋಕ್‌ಕುಮಾರ್ ಉದ್ಘಾಟಿಸಿದರು. ರಾಘವೇಂದ್ರ ಪ್ರಸನ್ನ, ಗಣಪತಿ ಜಕಾತಿ, ಶಶಿಧರ್, ವೆಂಕಟೇಶಪ್ಪ ಇತರರಿದ್ದರು.