ನ್ಯೂಸ್

MotoGP ಇವೆಂಟ್; ಇದು ಜಾಗತಿಕ ಆಟೋಮೊಬೈಲ್ ಹೂಡಿಕೆಗಳನ್ನು ಉತ್ತೇಜಿಸುತ್ತದೆ: ಸಿಎಂ ಯೋಗಿ ಆದಿತ್ಯನಾಥ್

ನೋಯ್ಡಾ: ಭಾನುವಾರ (ಸೆ.24) ಉತ್ತರಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮೋಟೋ ಜಿಪಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್​, "ಇದು ಕ್ರೀಡಾ ಚಟುವಟಿಕೆಗಳಿಗೆ ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ. ಈ ವಲಯವನ್ನು ಉತ್ತೇಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ" ಎಂದು ಹೇಳಿದರು.

"ಬುದ್ಧ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ (BIC) ನಡೆಯುತ್ತಿರುವ ಭಾರತದಲ್ಲಿ ಪಲ್ಸೇಟಿಂಗ್ ಮೋಟಾರ್‌ಸೈಕಲ್ ರೇಸ್‌ನ ಚೊಚ್ಚಲ ಪ್ರದರ್ಶನಕ್ಕೆ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ" ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಎಂಎಸ್‌ಎಂಇ ಸಚಿವ ರಾಕೇಶ್ ಸಚನ್, ಕೈಗಾರಿಕಾ ಹಾಗೂ ರಫ್ತು ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ಭಾಗವಹಿಸಿದ್ದ ಸಮಾವೇಶದಲ್ಲಿ ಹಲವಾರು ಪ್ರಮುಖ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು,(ಏಜೆನ್ಸೀಸ್).