ನ್ಯೂಸ್

ಸ್ಪೇನ್​ನಲ್ಲಿ ಕರೊನಾ ಪಿಡುಗಿಗೆ ಒಂದೇ ದಿನ 950 ಮಂದಿ ಬಲಿ, ಗರಿಷ್ಠ ಸಾವಿನ ದಾಖಲೆ

ನವದೆಹಲಿ: ಸ್ಪೇನ್​ನಲ್ಲಿ 24 ಗಂಟೆ ಅವಧಿಯಲ್ಲಿ 950 ಮಂದಿ ಕರೊನಾ ಪಿಡುಗಿಗೆ ಬಲಿಯಾಗಿದ್ದಾರೆ. ಇದು ಇದುವರೆಗಿನ ದಾಖಲೆಯಾಗಿದೆ. ತನ್ಮೂಲಕ ಸ್ಪೇನ್​ನಲ್ಲಿ ಕರೊನಾದಿಂದ ಸತ್ತವರ ಸಂಖ್ಯೆ 10 ಸಾವಿರ ದಾಟಿದೆ.

ಇಟಲಿಯಲ್ಲಿ ಕರೊನಾ ಪಿಡುಗಿನಿಂದ ಒಂದೇ ದಿನ 919 ಜನ ಮೃತಪಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು. ಸ್ಪೇನ್​ನಲ್ಲಿ ಮಂಗಳವಾರ 864 ಮಂದಿ ಸತ್ತಿದ್ದರು.

ಗುರುವಾರ 8,102 ಜನರಿಗೆ ಕರೊನಾ ವೈರಸ್​ ಸೋಂಕು ತಗುಲಿರುವುದು ಖಚಿತಪಟ್ಟಿದ್ದು, ಒಟ್ಟು ಸೋಂಕಿತ ಸಂಖ್ಯೆ 1,19,238 ತಲುಪಿರುವುದಾಗಿ ಸ್ಪೇನ್​ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್​ -19ನಿಂದಾಗಿ ಇಟಲಿಯಲ್ಲಿ ಗರಿಷ್ಠ 13,155 ಜನರು ಮೃತಪಟ್ಟಿದ್ದು, ಸ್ಪೇನ್​ 2ನೇ ಸ್ಥಾನದಲ್ಲಿದೆ. ಸೋಂಕಿತರ ಸಂಖ್ಯೆಯ ಪಟ್ಟಿಯಲ್ಲಿ ಅಮೆರಿಕ (2,15,344) ಮತ್ತು ಇಟಲಿ (1,10,574) ನಂತರದ ಸ್ಥಾನದಲ್ಲಿದೆ.