ಕೋಳಿಗುಡ್ಡ: ಎಲ್ಲಿ ದಾನ, ಧರ್ಮ ಹಾಗೂ ಸತ್ಕಾರ್ಯಗಳು ನಡೆಯುತ್ತವೋ ಅಲ್ಲಿ ಯಶಸ್ಸು ನಿಶ್ಚಿತ ಎನ್ನುವುದಕ್ಕೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ನಿದರ್ಶನವಾಗಿದ್ದಾರೆ. ಅವರ ಮೇಲಿನ ಜನರ ವಿಶ್ವಾಸದ ಫಲವಾಗಿ ಬೀರೇಶ್ವರ ಸೊಸೈಟಿಯ 221ನೇ ಶಾಖೆ ಉದ್ಘಾಟನೆಯಾಗುತ್ತಿದೆ ಎಂದು ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಬುಧವಾರ ಜೊಲ್ಲೆ ಗ್ರೂಪ್‌ನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ 221ನೇ ನೂತನ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಹಕಾರಿ ತತ್ತ್ವ ಹಾಗೂ ವಿಶ್ವಾಸದ ತಳಹದಿಯ ಮೇಲೆ ಮುನ್ನಡೆಯುತ್ತಿರುವ ಬೀರೇಶ್ವರ ಸೊಸೈಟಿಯಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಜನರು ಠೇವು ಇಟ್ಟಿರುವುದು ಸಾಮಾನ್ಯದ ಮಾತಲ್ಲ. ಜೊಲ್ಲೆ ಅವರ ನೇತೃತ್ವದ ಸಂಸ್ಥೆ ಮತ್ತಷ್ಟು ಪ್ರಗತಿ ಪಥದತ್ತ ಸಾಗಲೆಂದು ಶ್ರೀಗಳು ಶುಭ ಹಾರೈಸಿದರು.
ಬಸಯ್ಯ ಹಿರೇಮಠ, ಅಪ್ಪನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ಉಪಾಧ್ಯಕ್ಷೆ ಮಂಜುಳಾ ಮಾದರ, ತಮ್ಮಣ್ಣೆಪ್ಪ ತೇಲಿ, ಮಹಾದೇವ ಚೌವಲಾ, ಆನಂದ ಕುಲಕರ್ಣಿ, ಪ್ರದಾನ ವ್ಯವಸ್ಥಾಪಕ ಬಹಾದ್ದೂರ ಗುರುವ, ಶಾಖೆ ವ್ಯವಸ್ಥಾಪಕ ರಮೇಶ ಪಾಟೀಲ, ಸಂಜು ಅವಕ್ಕನವರ, ಚೇತನಗೌಡ ಪಾಟೀಲ, ಪರಮೇಶ್ವರ ಮುಳ್ಳೂರ, ವಿಠ್ಠಲ ಮಾಚಕನೂರ, ಶ್ರೀನಿವಾಸ ಅಮಲಝರಿ, ಸಿದ್ಧರಾಮ ಹಲಕ್ಕಿ, ಶಿವರಾಯ ಯಲಡಗಿ, ರಾಮಣ್ಣ ಗುರವ, ಮಾಯಪ್ಪ ಕಾರತಗಿ ಇತರರಿದ್ದರು