ಭೋಪಾಲ್: ಸೊಸೆಯ ಖಾಸಗಿ ಅಂಗಕ್ಕೆ ಅತ್ತೆ, ಮಾವ, ಪತಿ ಖಾರದ ಪುಡಿ, ಬಿಸಿ ಕಬ್ಬಿಣದ ರಾಡ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಮದ್ಯಪ್ರದೇಶದಲ್ಲಿ ರಾಜ್ಘಡದಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸುತ್ತಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ರಾಜ್ಘಡ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ರೋಹಿತ್ ರುಹೇಲಾ ಎಂಬ ವ್ಯಕ್ತಿ ಎಂಬ ವ್ಯಕ್ತಿಯು ಸಂತ್ರಸ್ತೆಯ ಬಳಿ ಸ್ಟೀಮ್ ಯಂತ್ರ ಕೊಡುವಂತೆ ಕೇಳಿದ್ದಾನೆ. ಒಳಗೆ ತರಲು ಹೋದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ಇದನ್ನು ಗಮನಿಸಿದ ಮಹಿಳೆಯ ನಾದಿನಿ ಕೂಡಲೇ ವಿಚಾರವನ್ನು ಅತ್ತೆ, ಮಾವ ಹಾಗೂ ಪತಿಗೆ ತಿಳಿಸಿದ್ದಾಳೆ.
ಆರೋಪಿ ಓಡಿ ಹೋಗಿದ್ದನ್ನು ಗಮನಿಸಿದ ಮಹಿಳೆಯ ಅತ್ತಿಗೆ ಅತ್ತೆ, ಮಾವ ಹಾಗೂ ಪತಿ ಆಕೆಯನ್ನು ಮನಬಂದಂತೆ ಥಳಿಸಿದ್ದು, ಖಾಸಗಿ ಅಂಗಕ್ಕೆ ಖಾರದ ಪುಡಿ ಹಾಗೂ ಬಿಸಿ ಕಬ್ಬಿಣದ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಆಕೆಯನ್ನು ಜಾಗವೊಂದರಲ್ಲಿ ಬಿಟ್ಟು ಹೋಗಿದ್ದು, ಅಜ್ಞಾತ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದು, ಸಂತ್ರಸ್ತೆಯನ್ನು ಪೋಷಕರ ಮನೆಗೆ ಬಿಟ್ಟು ಬಂದಿದ್ದಾರೆ.
ಗಂಡನ ಮನೆಯಲ್ಲಿ ನಡೆದ ಘಟನೆಯನ್ನು ಮಹಿಳೆ ಪೋಷಕರ ಬಳಿ ವಿವರಿಸಿದ್ದು, ಆ ಬಳಿಕ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115 (2), 74, 64, 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಘಡ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.