ದೆಹಲಿಯಲ್ಲಿ ರಾವಣನ ಜತೆಗೆ ಜಿರಳೆ ಪ್ರತಿಕೃತಿಯ ದಹನಕ್ಕೆ ಸಿದ್ಧತೆ 
ನ್ಯೂಸ್

ದೆಹಲಿಯಲ್ಲಿ ಈ ಬಾರಿ ರಾವಣನ ಜತೆ ಜಿರಳೆ ದಹನ; ದಸರಾಗೆ 30 ಅಡಿ ಎತ್ತರದ ಕಾಕ್ರೋಚ್ ಗೊಂಬೆ ಸಿದ್ಧ! | 30-foot cockroach effigy

ದೆಹಲಿಯ ಶ್ರೀ ಕೇಶವ ರಾಮಲೀಲಾ ಸಮಿತಿ ಈ ಬಾರಿ ದಸರಾ ಆಚರಣೆಯಲ್ಲಿ ರಾವಣನ ಪ್ರತಿಕೃತಿಯ ಜತೆಗೆ 30 ಅಡಿ ಎತ್ತರದ ಜಿರಳೆ ಗೊಂಬೆಯನ್ನೂ ದಹಿಸಲು ಸಿದ್ಧತೆ ನಡೆಸಿದೆ. ಸಮಾಜದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವ ಸಾರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Delhi Dussehra 2026: ದಸರಾ ವೇಳೆ ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳನ್ನು ದಹಿಸುವುದು ವಾಡಿಕೆ. ಆದರೆ, ಈ ಬಾರಿ ದೆಹಲಿಯಲ್ಲಿ ರಾವಣನ ಜತೆ 30 ಅಡಿ ಎತ್ತರದ ಜಿರಳೆಯ ಪ್ರತಿಕೃತಿಯನ್ನೂ ದಹಿಸಲು ಶ್ರೀ ಕೇಶವ ರಾಮಲೀಲಾ ಸಮಿತಿ ನಿರ್ಧರಿಸಿದೆ. ಮನೆ, ಸುತ್ತಮುತ್ತಲಿನ ಪರಿಸರ ಹಾಗೂ ಸಮಾಜದಲ್ಲಿ ಸ್ವಚ್ಛತೆ ಕಾಪಾಡುವ ಸಂದೇಶ ಸಾರುವುದು ಈ ಕ್ರಮದ ಉದ್ದೇಶ ಎಂದು ಹೇಳಲಾಗಿದೆ.

ಶ್ರೀ ಕೇಶವ ರಾಮಲೀಲಾ ಸಮಿತಿಯ ಅಧ್ಯಕ್ಷ ಹಾಗೂ ಮಾಡೆಲ್ ಟೌನ್ ಶಾಸಕ ಅಶೋಕ್ ಗೋಯಲ್ ದೇವರಾಹ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿರಳೆಯು ಕೊಳಕು ಮತ್ತು ಅನೈರ್ಮಲ್ಯದ ಸಂಕೇತವಾಗಿದ್ದು, ಮನೆ, ಪರಿಸರ ಹಾಗೂ ಸಮಾಜದಲ್ಲಿ ಸ್ವಚ್ಛತೆಯ ಮಹತ್ವ ಸಾರಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾವಣನ ಜತೆ 30 ಅಡಿ ಜಿರಳೆ ದಹನ

ವಿಜಯದಶಮಿ ಸತ್ಯದ ಗೆಲುವು ಮತ್ತು ಕೆಡುಕಿನ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿದೆ. ಈ ಬಾರಿ ದೆಹಲಿಯ ಪೀತಂಪುರದ ಎನ್‌ಎಸ್‌ಪಿ ಪ್ರದೇಶದಲ್ಲಿರುವ ಶ್ರೀ ಕೇಶವ ರಾಮಲೀಲಾ ಸಮಿತಿಯ ಮೈದಾನದಲ್ಲಿ ರಾವಣನ ಜತೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿಯನ್ನೂ ದಹಿಸಲಾಗುತ್ತದೆ. ಮನೆ ಮತ್ತು ಸಮಾಜದಲ್ಲಿನ ಕೊಳಕು, ಅನೈರ್ಮಲ್ಯವನ್ನು ತೊಡೆದುಹಾಕುವ ಬಗ್ಗೆ ಜಾಗೃತಿ ಮೂಡಿಸುವುದು ಸಮಿತಿಯ ಉದ್ದೇಶವಾಗಿದೆ.

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ

ಇತ್ತ, ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗಳನ್ನು ನಡೆಸುತ್ತಿದೆ. ಜೂನ್ ಮತ್ತು ಜುಲೈನಲ್ಲಿ ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಪಕ್ಷ, ಇದೀಗ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸುತ್ತಿದೆ.

ಇದನ್ನೂ ಓದಿ: ಮೋದಿ ಜೀ, ನಿಮ್ಮ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ': ಮಾರ್ಕೊ ರೂಬಿಯೊ ಭೇಟಿ ವಿಚಾರವಾಗಿ ರಾಹುಲ್ ಗಾಂಧಿ ಟೀಕೆ | Rahul Gandhi on Modi

ಇನ್ನೊಂದೆಡೆ, ದಸರಾ ವೇಳೆ ರಾವಣನ ಜತೆ 30 ಅಡಿ ಎತ್ತರದ ಜಿರಳೆ ಪ್ರತಿಕೃತಿಯನ್ನೂ ದಹಿಸುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಿರ್ಧಾರದ ಪರ-ವಿರೋಧವಾಗಿ ಚರ್ಚೆಗಳು ನಡೆಯುತ್ತಿದ್ದು, ಕೆಲ ನೆಟ್ಟಿಗರು, “ಜಿರಳೆಗಳಿಗೇ ಇಷ್ಟು ಹೆದರಿದರೆ ಹೇಗೆ?” ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)