ನ್ಯೂಸ್

24 ಗಂಟೆಗಳಲ್ಲಿ 58 ಪೊಲೀಸರಲ್ಲಿ ಕೋವಿಡ್​-19 ಸೋಂಕು!

ಮಹಾರಾಷ್ಟ್ರ: ಕರೊನಾ ವಾರಿಯರ್ಸ್ ಆಗಿ ಹಗಲಿರುಳೂ ಕೆಲಸ ಮಾಡುತ್ತಿರುವ ಪೊಲೀಸರು ಕೋವಿಡ್​-19 ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅದನ್ನು ಪುಷ್ಟೀಕರಿಸುವ ರೀತಿ ಈಗ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 58 ಪೊಲೀಸರು ಕೋವಿಡ್​-19 ಸೋಂಕಿಗೆ ಒಳಗಾಗಿದ್ದಾರೆ.

ಹೌದು.. ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್​-19 ಪರೀಕ್ಷೆಗೆ ಒಳಪಟ್ಟ ಪೊಲೀಸರ ಪೈಕಿ 24 ಗಂಟೆಗಳ ಅವಧಿಯಲ್ಲಿ 58 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿಗೆ ಒಳಗಾದ ಮಹಾರಾಷ್ಟ್ರ ಪೊಲೀಸರ ಸಂಖ್ಯೆ 26,589ಕ್ಕೆ ತಲುಪಿದೆ. ಆದರೆ ಸದ್ಯ 24,919 ಮಂದಿ ಸೋಂಕುಮುಕ್ತರಾಗಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,386 ಇದೆ. ಮತ್ತೊಂದೆಡೆ 284 ಪೊಲೀಸರು ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಇನ್ನೊಂದೆಡೆ ಕರೊನಾ ವಾರಿಯರ್ಸ್ ಆಗಿರುವ 381 ಪೊಲೀಸರ ಮೇಲೆ ಹಲ್ಲೆ ನಡೆದ ಪ್ರಕರಣಗಳು ವರದಿಯಾಗಿದ್ದು, ಆ ಸಂಬಂಧ 904 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೋವಿಡ್​-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 16,78,406ಕ್ಕೆ ತಲುಪಿದ್ದು, ಆ ಪೈಕಿ 1,23,585 ಪ್ರಕರಣಗಳಷ್ಟೇ ಸಕ್ರಿಯವಾಗಿವೆ. (ಏಜೆನ್ಸೀಸ್​)