ಮೈನಹಳ್ಳಿ ಗ್ರಾಮದಲ್ಲಿ ಬುಡ್ಡಮ್ಮದೇವಿ ಜಾತ್ರೆ ನಿಮಿತ್ತ ರಕ್ತದಾನ ಶಿಬಿರ ನಡೆಯಿತು.  
ನ್ಯೂಸ್

ಬುಡ್ಡಮ್ಮದೇವಿ ಜಾತ್ರೆ ಅಂಗವಾಗಿ ರಕ್ತದಾನ ಶಿಬಿರ

ಅಳವಂಡಿ: ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ್ ಹೇಳಿದರು.

ಮೈನಳ್ಳಿ ಗ್ರಾಮದಲ್ಲಿ ಶಿವಶರಣೆ ಬುಡ್ಡಮ್ಮದೇವಿ ಜಾತ್ರೆ ಅಂಗವಾಗಿ ಜಾತ್ರಾ ಸಮಿತಿ ಹಾಗೂ ಕೊಪ್ಪಳ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸೋಮವಾರ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಕ್ತಹೀನತೆ ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು, ಬಾಣಂತಿಯರಿಗೆ ಹಾಗೂ ಅಪಘಾತವಾದಾಗ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಹಾಗಾಗಿ ರಕ್ತದಾನದ ಶಿಬಿರಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕಾಗಿದೆ. ಯುವ ಜನಾಂಗ ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷ ಮರಿಶಾಂತವೀರ ಚಕ್ಕಡಿ, ಪ್ರಮುಖರಾದ ಸಕ್ರಡ್ಡಿ ಹ್ಯಾಟಿ, ಮಹೇಂದ್ರಪ್ಪ, ಭೋಜಪ್ಪ ಹಳ್ಳಿ, ಬಸವರಾಜ ಮೂಲಿಮನಿ, ಈರಣ್ಣ ಮೂಲಿಮನಿ, ಶೇಖರಪ್ಪ, ಗಂಗಾಧರ, ರಾಜು, ಕರಿಯಪ್ಪ ಇತರರಿದ್ದರು.