ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀಗೌರಿ-ಗಣೇಶ್ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. 
ನ್ಯೂಸ್

ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ

ಸೋಮವಾರಪೇಟೆ: ಪಟ್ಟಣದ ವಿವಿಧೆಡೆ ಪ್ರತಿಷ್ಠಾಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಭಕ್ತಿಯಿಂದ ಬುಧವಾರ ರಾತ್ರಿ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.

ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಶ್ರೀಗಣಪತಿ, ಎಂ.ಡಿ.ಬ್ಲಾಕ್, ಆಲೇಕಟ್ಟೆ ರಸ್ತೆ, ಬಸವೇಶ್ವರ ರಸ್ತೆ, ಕಕ್ಕೆಹೊಳೆ, ಜನತ ಕಾಲನಿಯಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗೊಂಬೆ ಕುಣಿತ ನೋಡುಗರನ್ನು ಅಕರ್ಷಿಸಿತು. ವಾದ್ಯಗೋಷ್ಠಿಗೆ ಭಕ್ತಾದಿಗಳು ಕುಣಿದು ಕುಪ್ಪಳಿಸಿದರು.