ನ್ಯೂಸ್

35ರ ವಿಧವೆ ಜೊತೆ ಅಕ್ರಮ ಸಂಬಂಧ; ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ತನ್ನ ತೋಟದಲ್ಲೇ ಗುಂಡಿ ತೋಡಿ ಮುಚ್ಚಿದ ಯುವಕ| Murder

ಈರೋಡ್: ತಮಿಳುನಾಡಿನ ಈರೋಡ್​ ಜಿಲ್ಲೆಯಲ್ಲಿ 27 ವರ್ಷದ ಯುವಕನೊಬ್ಬ 35 ವಯಸ್ಸಿನ ವಿಧವಾ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ತನ್ನ ತೋಟದಲ್ಲೇ ಆಕೆಯನ್ನು ಕೊಲೆಗೈದು(Murder) ಗುಂಡಿ ತೋಡಿ ಹೂತು ಹಾಕಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಸೋಮವಾರ(ನ. 03) ವರದಿಯಾಗಿದೆ.

ಭಾನುವಾರ ಮಳೆ ಬಂದ ಬಳಿಕ ಅಣಬೆಯನ್ನು ಕೀಳಲು ಹೊಲಕ್ಕೆ ಹೋದಾಗ ರಕ್ತಸಿಕ್ತ ಚಾಕು, ಮಣ್ಣ ಹೂತು ಹಾಕಿರುವ ಜಾಗದಲ್ಲಿ ಕೂದಲಿನ ಎಳೆಗಳನ್ನು ಸ್ಥಳೀಯರು ನೋಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿ ಹೊಲದಲ್ಲಿ ಮೂರು ಅಡಿ ಆಳದ ಗುಂಡಿ ತೊಡಿದಾಗ ಮಹಿಳೆ ಶವ ಪತ್ತೆಯಾಗಿದೆ.
ಮೃತಳನ್ನು ಅಪ್ಪಕುಡಲ್ ಪಟ್ಟಣದ ಬ್ಯೂಟಿಷಿಯನ್ ಸೋನಿಯಾ(35) ಎಂದು ಗುರುತಿಸಲಾಗಿದೆ. ಬಿ.ಕಾಂ ಓದಿದ್ದು, 2 ವರ್ಷಗಳ ಹಿಂದೆ ಪತಿ ಮೃತಪಟ್ಟಿದ್ದರೆನ್ನಲಾಗಿದೆ. ಈ ಹಿನ್ನಲೆ ಮಕ್ಕಳೊಂದಿಗೆ ತಾಯಿಯೊಂದಿಗೆ ವಾಸಿಸುತ್ತಿದ್ದು, ನ. 02ರಿಂದ ಕಾಣೆಯಾಗಿದ್ದಳು ಎನ್ನಲಾಗಿದೆ. ಕೆಲಸದಿಂದ ಮನೆಗೆ ವಾಪಸ್ ಬಾರದ ಹಿನ್ನೆಲೆ ಅವರ ಕುಟುಂಬವು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿತ್ತು.
ಪೊಲೀಸರು ಶವ ವಶಪಡಿಸಿಕೊಂಡು ತನಿಖೆ ನಡೆಸಿದ್ದು ಶವ ಸಿಕ್ಕ ಜಮೀನು ಮಾಲೀಕ ಮೋಹನ್ ಕುಮಾರ್ ಜೊತೆ ಸೋನಿಯಾ ಅಕ್ರಮ ಸಂಬಂಧ ಹೊಂದಿದ್ದು ಫೋನ್ ಕರೆಯ ದಾಖಲೆಗಳಿಂದ ಬಹಿರಂಗವಾಗಿದೆ. ಆತನನ್ನು ಬಂಧಿಸಿ  ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪದೇ ಪದೇ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದರಿಂದ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮಹಿಳೆಯ ಕೊಲೆ ನಡೆದ ಬಗ್ಗೆ ಪೊಲೀಸರು ಹೇಳಿದ್ದೇನು?

ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು, ಸೋನಿಯಾ ಮತ್ತು ಮೋಹನ್ ಕುಮಾರ್ ಎರಡು ವರ್ಷಗಳ ಹಿಂದೆ ಗೋಬಿಚೆಟ್ಟಿಪಾಳ್ಯಂ ಬಳಿಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಭೇಟಿಯಾಗಿದ್ದಾರೆ. ಅಲ್ಲಿಂದ ತಮ್ಮ ಸಂಬಂಧವನ್ನು ಬೆಳೆಸಿಕೊಂಡು ಆಗಾಗ ಮೋಹನ್ ಕುಮಾರ್ ಕೃಷಿಭೂಮಿಯಲ್ಲಿ ಇಬ್ಬರು ಸೇರುತ್ತಿದ್ದರು ಎಂದು ತಿಳಿಸಿದ್ದಾರೆ

ಕೊಲೆ ನಡೆದ ದಿನ ಮೋಹನ್ ಕುಮಾರ್ ತನ್ನ ಜಮೀನಿನಲ್ಲಿ 3 ಅಡಿ ಗುಂಡಿ ತೋಡಿ, ರಾತ್ರಿ 8 ಗಂಟೆ ಸುಮಾರಿಗೆ ಸೋನಿಯಾಳನ್ನು ಅಲ್ಲಿಗೆ ಕರೆಸಿಕೊಂಡಿದ್ದು, ಇಬ್ಬರು ಏಕಾಂತದಲ್ಲಿ ಸಮಯ ಕಳೆದಿದ್ದು, ಈ ವೇಳೆ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು, ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೊಬೈಲ್ ಮತ್ತು ಬಟ್ಟೆಗಳನ್ನು ಭವಾನಿ ಕಾಲುವೆ ಬಳಿ ಎಸೆದಿದ್ದಾನೆ. ಮರುದಿನ ಬೆಳಗ್ಗೆ ಏನೂ ನಡೆದಿಲ್ಲ ಎನ್ನುವಂತೆ ನಟಿಸಿದ್ದಾನೆ.

ಪೊಲೀಸರು ಶವದ ಮರಣೋತ್ತರ ಪರೀಕ್ಷೆ ವರದಿ ನೋಡಿ, ಜಮೀನು ಮಾಲೀಕನ ಕರೆಗಳ ಸಂಪರ್ಕ ತೋರಿಸಿ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರವನ್ನು ಬಾಯಿಬಿಟ್ಟಿದ್ದಾನೆ. ಘಟನೆ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)