ನ್ಯೂಸ್

ರಂಜಾನ್ ಹಬ್ಬದ ಹಿನ್ನೆಲೆ; ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಂಟೆಗಳ ರಕ್ಷಣೆ

ತಮಿಳುನಾಡು: ಅಕ್ರಮವಾಗಿ ಸಾಗಿಸುತ್ತಿದ್ದ ಐದು ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಹೊಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಣೆ ಮಾಡಿದ ಒಂಟೆಗಳನ್ನು ಗೋಶಾಲೆಗೆ ರವಾನೆ ಮಾಡಲಾಗಿದೆ.

ರಂಜಾನ್ ಹಬ್ಬದ ವೇಳೆ ಬಲಿ ಕೊಡಲು ಒಂಟೆಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ತಮಿಳುನಾಡು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಪಸಂದ್ರ ಬಳಿ ಐದು ಒಂಟೆಗಳನ್ನು ತಂದು ಕಟ್ಟಿ ಹಾಕಲಾಗಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಹಿಂದು ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ಅರಣ್ಯ ಇಲಾಖೆ, ಪೋಲೀಸರು ಹಾಗೂ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಹಿಂದು ಕಾರ್ಯಕರ್ತರು ದಾಳಿ ಮಾಡುತ್ತಿದ್ದಂತೆ ಸಾಗಾಟಗಾರರು ಒಂಟೆಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಬೆಂಗಳೂರು ಸೇರಿದಂತೆ ಹಲವೆಡೆಗೆ ಒಂಟೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ರಾಜ್ಯದಲ್ಲಿ ಚುನಾವಣಾ ಚೆಕ್​ಪೋಸ್ಟ್​ಗಳ ನಿಯೋಜನೆ ಹಿನ್ನೆಲೆ ಒಂಟೆಗಳನ್ನ ಸಾಗಿಸಲಾಗದೆ ಗೋಪಸಂದ್ರ ಅರಣ್ಯ ಪ್ರದೇಶದಲ್ಲಿ ಕಟ್ಟಿಹಾಕಿದ್ದರು.