ಕಿರುವಾರ ಎಸ್.ಸುದರ್ಶನ್ ಕೋಲಾರ
ನಿವೇಶ, ವಸತಿ ಹಿತರಿಗೆ ಸ್ವಂತ ಸೂರು ಕಲ್ಪಿಸಬೇಕು ಎಂಬ ಉದ್ದೇಶದಿಂದ ರಾಜ್ಯ, ಕೇಂದ್ರ ಸರ್ಕಾರಗಳು ವಿವಿಧ ವಸತಿ ಯೋಜನೆಗಳಡಿ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಿದ್ದು, ಇದರ ಲಾಂತರ ರೂ. ಹಣ ಮಧ್ಯವರ್ತಿಗಳ ಪಾಲಾಗಿದೆ.
ಗ್ರಾಮೀಣ ಭಾಗದಲ್ಲಿ ಮನೆಯಿಲ್ಲದೆ ಇರುವವರಿಗೆ ಸ್ವಂತ ಸೂರು ಕಲ್ಪಿಸಲು ಸರ್ಕಾರಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ), ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ ಗ್ರಾಮೀಣ, ಬಸವ ವಸತಿ ಯೋಜನೆ, ವಾಜಪೇಯಿ ವಸತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಪ್ರತಿ ಹಣಕಾಸು ವರ್ಷದಲ್ಲಿ ವಿವಿಧ ಯೋಜನೆಗಳಡಿ ಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಲಾನುಭವಿಗಳ ಹಂಚಿಕೆಯನ್ನೂ ಬಹಳ ಪಾರದರ್ಶಕವಾಗಿ ಗ್ರಾಮ ಸಭೆಗಳಲ್ಲಿ ನಡೆಸಲಾಗುತ್ತದೆ. ಮನೆ ನಿರ್ಮಾಣಕ್ಕೆ ಮಂಜೂರಾತಿ ಆದೇಶ ನೀಡಿ ದಾಖಲೆಗಳನ್ನು ಪಂಚಾಯಿತಿ ಅಧಿಕಾರಿಗಳು ಸಂಗ್ರಹಿಸುತ್ತಾರೆ. ಮನೆಯ ನಿರ್ಮಾಣದ ಹಂತವನ್ನು ನೋಡಿಕೊಂಡು ಬಿಲ್ ಪಾವತಿ ಮಾಡಲಾಗುತ್ತದೆ. ಇದರ ಜವಾಬ್ದಾರಿಯು ಪಿಡಿಒ, ತಾಪಂ ವಸತಿ ಯೋಜನೆ ನೋಡಲ್ ಅಧಿಕಾರಿ, ತಾಲೂಕು ಪಂಚಾಯಿತಿ ಇಒ ಅವರದಾಗಿರುತ್ತದೆ. ಮೊದಲ ಒಂದು ಎರಡು ಕಂತು ಲಾನುಭವಿ ಖಾತೆಗೆ ಜಮಾ ಮಾಡಿ, ನಂತರದ ಬಿಲ್ ಪಾವತಿ ಮಾಡಲು ಲಾನುಭವಿಯ ಖಾತೆಯನ್ನು ಅದಲು ಬದಲು ಮಾಡಿ, ಬಡವರ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಕೋಲಾರದಲ್ಲಿ ಸಾ ಸಿಕ್ಕಿದೆ. ಕೋಲಾರ ತಾಲೂಕಿನ ಹರಟಿ ಗ್ರಾಪಂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಇದೇ ರೀತಿ ವಿವಿಧ ತಾಲೂಕು ವ್ಯಾಪ್ತಿಯಲ್ಲಿನ ಗ್ರಾಪಂಗಳಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.
* ಅಧಿಕಾರಿಗಳಿಗೆ ಗೊತ್ತಿದ್ದರೂ ಮುಚ್ಚಿಟ್ಟಿದ್ದರು
ಕೋಲಾರ ತಾಲೂಕಿನ ಹರಟಿ ಗ್ರಾಪಂನಿಂದ 2023&-24ನೇ ಸಾಲಿನ ಪಿಎಂಎವೈ ಯೋಜನೆಯಡಿ ಒಟ್ಟು 79 ಮನೆಗಳು ಮಂಜೂರಾಗಿದ್ದು, ಆ ಪೈಕಿ ಪ.ಜಾತಿ, ಪಂಗಡ ಲಾನುಭವಿಗಳು 56, ಸಾಮಾನ್ಯ ವರ್ಗದವರಿಗೆ 23 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಒಟ್ಟು 11 ಲಾನುಭವಿಗಳಿಗೆ ವಸತಿ ಹಣ ವಂಚನೆಯಾಗಿದ್ದು, 12 ಲಕ್ಷ ರೂ. ಅವ್ಯವಹಾರವಾಗಿದೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಹರಟಿ ಗ್ರಾಪಂ ಸದಸ್ಯ ಸುರೇಶ್ ಬಾಬು ತಾಪಂ ಇಒಗೆ ದೂರು ನೀಡಿದ್ದರು. ತಾಲೂಕು ವಸತಿ ಯೋಜನಾ ಅನುಷ್ಠಾನಾಧಿಕಾರಿ ಮಂಜುನಾಥ ಎಂಬಾತ ಗ್ರಾಮ ಪಂಚಾಯಿತಿಯಲ್ಲಿ ಮಧ್ಯವರ್ತಿಗಳನ್ನು ಉಪಯೋಗಿಸಿಕೊಂಡು ಹಣ ಡ್ರಾ ಮಾಡಿಸಿಕೊಂಡು ಅಕ್ರಮ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಆದರೂ ಸಹ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇದ್ದರೂ ಮೌನವಾಗಿದ್ದರು. ಸದಸ್ಯ ದೂರು ನೀಡುವವರೆಗೂ ಪ್ರಕರಣ ಬಯಲಿಗೆ ಬಾರದಂತೆ ಮುಚ್ಚಿಟ್ಟಿದ್ದರು.
* ಬೆಳಕಿಗೆ ಬಂದಿದ್ದು ಹೇಗೆ...?
ಸಂಸದ ಎಂ.ಮಲ್ಲೇಶ್ಬಾಬು ಅವರು ದಿಶಾ ಸಭೆಯಲ್ಲಿ ಮನೆಗಳ ಮಂಜೂರಾತಿಯಲ್ಲಿ ಅಕ್ರಮವಾಗಿದ್ದು, ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಜಿಪಂ ಸಿಇಒ ಡಾ.ಪ್ರವಿಣ್ ಪಿ.ಬಾಗೇವಾಡಿ ಅವರು ಖುದ್ದು ಪರಿಶೀಲಿಸಿ ವರದಿ ನೀಡುವಂತೆ ಜಿಪಂ ಯೋಜನಾ ನಿರ್ದೇಶಕ, ವಸತಿ ಯೋಜನೆ ವಿಷಯ ನಿರ್ವಾಹಕ, ಕೆಜಿಎಫ್ ವಸತಿ ನೋಡಲ್ ಅಧಿಕಾರಿ ಒಳಗೊಂಡ ತಂಡ ರಚಿಸಿದ್ದರು.
ಜು.22ರಂದು ಅಧಿಕಾರಿಗಳ ತಂಡ ಹರಟಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಪಿಡಿಒ, ಉಪಾಧ್ಯಕ್ಷ, ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ವಿಚಾರಣೆ ನಡೆಸಿದ್ದರು.
* ನೋಡಲ್ ಅಧಿಕಾರಿ ವಿರುದ್ಧ ದೂರು
ತಾಪಂ ತಾಲೂಕು ವಸತಿ ನೋಡಲ್ ಅಧಿಕಾರಿಯಾಗಿ ಹೊರಗುತ್ತಿಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ವಿರುದ್ದ ತಾಪಂ ಇಒ ಬಿ.ಎಂ.ಮಂಜುನಾಥ್ ಅವರು ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಆ.11ರಂದು ಪ್ರಕರಣ ದಾಖಲು ಮಾಡಿದ್ದು, ಸದ್ಯಕ್ಕೆ ಮಂಜುನಾಥ್ ತಲೆಮರಿಸಿಕೊಂಡಿದ್ದಾನೆ.
* ಫಲಾನುಭವಿಲ್ಲದವರಿಗೆ ಹಣ ಜಮೆ
ಯೋಜನೆ ಅಡಿಯಲ್ಲಿ ಮನೆಗಳು ಮಂಜೂರು ಆಗಿರುವ ಫಲಾನುಭವಿಗಳ ಖಾತೆ ಬದಲಾಗಿ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿದೆ. ವೆಬ್ಸೈಟ್ನಲ್ಲೂ ಸಹ ಲಾನುಭವಿಯಲ್ಲದ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕೋಟ್..
ಅಕ್ರಮ ಎಸಗಿರುವ ನೋಡಲ್ ಅಧಿಕಾರಿ ವಿರುದ್ಧ ದೂರು ದಾಖಲಿಸಲಾಗಿದೆ. ಈ ಸಂಬಂಧ ತಂಡ ರಚನೆ ಮಾಡಲಾಗಿದ್ದು, ವರದಿಯನ್ನು ಸಿಇಒ ಅವರಿಗೆ ಸಲ್ಲಿಸಲಾಗುತ್ತದೆ.
- ಬಿ.ಎನ್.ಮಂಜುನಾಥ್, ಇಒ, ತಾಪಂ, ಕೋಲಾರ.
ಕೋಟ್..
ಪಂಚಾಯಿತಿಯಲ್ಲಿ ಅಧಿಕಾರ ಹಿಡಿತದಲ್ಲಿ ಇಲ್ಲದಿರುವುದರಿಂದ ಅಕ್ರಮ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಿ ಶಾಮೀಲಾಗಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು.
- ಕೆ.ವೈ.ಗಣೇಶ್ಗೌಡ, ಮಾಜಿ ಸದಸ್ಯ, ಹರಟಿ ಗ್ರಾಪಂ