ಅದಿರು ಕಳ್ಳತನ ಮತ್ತು ಅಕ್ರಮ ಸಾಗಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ(ಕಾರವಾರ ಕ್ಷೇತ್ರ ಎಂಎಲ್ಎ) ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯದ(ED) ಅಧಿಕಾರಿಗಳು ಮಂಗಳವಾರ(ಸೆ.09) ಬಂಧಿಸಿದ್ದಾರೆ.
ಇನ್ನು ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ಆಗಸ್ಟ್ 13 ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಆಸ್ತಿ, ನಗದು ಹಣ, ಚಿನ್ನಾಭರಣ ಪತ್ತೆಯಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ವಿಚಾರಣೆ ಬಳಿಕ ಶಾಸಕ ಸತೀಶ್ ಅವರನ್ನ ಬಂಧಿಸಲಾಗಿದೆ.
ಅಕ್ರಮ ಅದಿರು ಪ್ರಕರಣದಲ್ಲಿ ಸತೀಶ ಸೈಲ್ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೈಕೋರ್ಟ್ ಅದಕ್ಕೆ ತಡೆ ನೀಡಿದ್ದು, ಸದ್ಯ ಸೈಲ್ ರಿಲೀಫ್ ಆಗಿದ್ದಾರೆ. ಇದೀಗ ಹೊಸ ಸವಾಲು ಎದುರಾಗಿದೆ.