ನ್ಯೂಸ್

ಅಕ್ರಮವಾಗಿ ಬಾತುಕೋಳಿ ಸಾಕಣೆ ಪ್ರಕರಣ; ಸೆ.4ಕ್ಕೆ ವಿಚಾರಣೆ ಮುಂದೂಡಿಕೆ| Darshan

Darshan: ನಟ ದರ್ಶನ್ ಫಾರಂ ಹೌಸ್‌ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನ ಸೆಪ್ಟೆಂಬರ್​ 4ಕ್ಕೆ ಮುಂದೂಡಲಾಗಿದೆ.

ವಿದೇಶಿ ಬಾತುಕೋಳಿ ಸಾಕಿದ್ದ ಸಂಬಂಧವಾಗಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ವಿರುದ್ಧ ಸಮನ್ಸ್ ಹೊರಡಿಸಲಾಗಿತ್ತು. ಮೈಸೂರಿನಲ್ಲಿರುವ ಫಾರ್ಮ್ ಹೌಸ್​ನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿದೇಶಿ ಮೂಲದ ಅಬಾರ್ ಹೆಡೆಡ್ ಗೂಸ್‌ಬಿ ಎಂಬ ಬಾತುಕೋಳಿಗಳನ್ನು ಸಾಕಿದ್ದರು. ಅರಣ್ಯಾಧಿಕಾರಿಗಳು ದಾಳಿ ಮಾಡಿ ವಿದೇಶಿ ಪ್ರಬೇಧದ ಬಾತುಕೋಳಿಗಳನ್ನು ವಶವಡಿಸಿಕೊಂಡಿದ್ದರು.

ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿ ಇರುವ ಫಾರ್ಮ್​ ಹೌಸ್​ನಲ್ಲಿ ದರ್ಶನ್ ಅವರು ಬಾರ್ ಹೆಡೆಡ್ ಗೂಸ್ ಬಾತುಕೋಳಿ ಸಾಕಿದ್ದರು. ಅರಣ್ಯ ಇಲಾಖೆ 2 ವರ್ಷದ ಹಿಂದೆ ನೋಟಿಸ್ ನೀಡಿ FIR ದಾಖಲಿಸಿತ್ತು. ವಿದೇಶಿ ಬಾತುಕೋಳಿ ಸಾಕಲು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿತ್ತು. ಇಂದು ಈ ಬಗ್ಗೆ ಕೋರ್ಟ್‌ ವಿಚಾರಣೆ ನಡೆಸಿದ ಬಳಿಕ ದರ್ಶನ್ ದಂಪತಿ ವಿಚಾರಣೆಯನ್ನ ಮುಂದೂಡಿಕೆ ಮಾಡಲಾಗಿದೆ.

(ಏಜೆನ್ಸೀಸ್)