ನ್ಯೂಸ್

ಮೊದಲ ಬಾರಿಗೆ ತನ್ನ ಮಗನ ಫೋಟೋವನ್ನು ಹಂಚಿಕೊಂಡ ನಟಿ ಇಲಿಯಾನ

ಮುಂಬೈ: ನಟಿ ಇಲಿಯಾನ ಮೊದಲ ಬಾರಿಗೆ ತನ್ನ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.

ಟಾಲಿವುಡ್​​ನ ಸ್ಟಾರ್ ಹೀರೋಯಿನ್ ಇಲಿಯಾನ ಈಗ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಗೊತ್ತೇ ಇದೆ.  ಮಗನಿಗೆ ಫಿಯೋನಿಕ್ಸ್ ಡೋಲನ್ ಎಂದು ಹೆಸರಿಸಿರುವುದನ್ನು ಬಹಿರಂಗಪಡಿಸುವ ಮೂಲಕ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಅಕ್ಟೋಬರ್ 1 ರಂದು, ಅವರ ಮಗ ಎರಡು ತಿಂಗಳುಗಳನ್ನು ಪೂರ್ಣಗೊಳಿಸಿದನು. ಈ ಸಂದರ್ಭದಲ್ಲಿ ಇಲಿಯಾನಾ ತಮ್ಮ ಮಗ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ ಖುಷಿಯಾಗಿದ್ದೇನೆ ಎಂದಿದ್ದಾರೆ. ಮಗನನ್ನು ಭುಜದ ಮೇಲೆ ಕೂರಿಸಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾಳೆ. ಈ ಫೋಟೋವನ್ನು ಶೇರ್ ಮಾಡಿ ಎರಡು ತಿಂಗಳಾಗಿದೆ ಎಂದು ಇಲಿಯಾನ ಕ್ಯಾಪ್ಷನ್ ನೀಡಿದ್ದಾರೆ.

ಈ ಹಿಂದೆ ಗರ್ಭಧಾರಣೆಯ ಫೋಟೋಗಳನ್ನು ಹಂಚಿಕೊಂಡಿದ್ದ ಇಲಿಯಾನಾ, ಮೊದಲ ಬಾರಿಗೆ ತನ್ನ ಮಗನ ಮುಖವನ್ನು ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಮತ್ತು ಟಾಲಿವುಡ್ ಸೆಲೆಬ್ರಿಟಿಗಳು ಇಲಿಯಾನಾ ಅವರ ಪೋಸ್ಟ್‌ಗೆ ಹೃದಯದ ಎಮೋಜಿಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಇಲಿಯಾನಾ ಸಿನಿಮಾಗಳ ವಿಚಾರಕ್ಕೆ ಬಂದರೆ, ಸದ್ಯ ಬಾಲಿವುಡ್ ನಾಯಕಿ ವಿದ್ಯಾ ಬಾಲನ್ ನಟಿಸುತ್ತಿರುವ ಚಿತ್ರದಲ್ಲಿ ಇಲಿಯಾನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.