ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವು ಪ್ರಕರಣ 
ನ್ಯೂಸ್

IIT ಬಾಂಬೆ ವಿದ್ಯಾರ್ಥಿ ಸಾವು: ‘ಜಾತಿ ತಾರತಮ್ಯ ಇರಲಿಲ್ಲ’ ಎಂದ ಆಪ್ತ ಸ್ನೇಹಿತ | IIT Bombay student death

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಜಾತಿ ತಾರತಮ್ಯದ ಆರೋಪ ಕೇಳಿಬಂದಿದೆ. ಆದರೆ ಸಾಹಿಲ್ ಆಪ್ತ ಸ್ನೇಹಿತ ಜಾತಿ ತಾರತಮ್ಯ ಇರಲಿಲ್ಲ ಎಂದು ಹೇಳಿದ್ದಾರೆ.

ಬಾಂಬೆಯಲ್ಲಿ ಸಾಹಿಲ್ ವಾಕೋಡೆ ಸಾವಿನ ಬಗ್ಗೆ ಪ್ರೊಟೆಸ್ಟ್​

ಜಾತಿ ತಾರತಮ್ಯ ಇರಲಿಲ್ಲ ಎಂದ ಮೃತನ ಆಪ್ತ ಸ್ನೇಹಿತ

ಪರೀಕ್ಷೆಯಲ್ಲಿ ಮೊಬೈಲ್, ಚಾಟ್‌ಜಿಪಿಟಿ ಬಳಕೆ ಆರೋಪ

Death of IIT Bombay student: ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವಿನ ಪ್ರಕರಣದಲ್ಲಿ ಜಾತಿ ತಾರತಮ್ಯದ ಆರೋಪ ಕೇಳಿಬಂದಿದೆ. ಆದರೆ, ಸಾಹಿಲ್ ಆಪ್ತ ಸ್ನೇಹಿತ ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ ಗಮನಕ್ಕೆ ಅಂತಹ ಯಾವುದೇ ಘಟನೆ ನಡೆದಿರಲಿಲ್ಲ ಎಂದು ಹೇಳಿದ್ದಾರೆ.

ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ಶುಕ್ರವಾರ ಐಐಟಿ ಬಾಂಬೆ ಹಾಸ್ಟೆಲ್‌ನಲ್ಲಿ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಮಧ್ಯಂತರ ಪರೀಕ್ಷೆಯಲ್ಲಿ ಮೊಬೈಲ್ ಹಾಗೂ ಚಾಟ್‌ಜಿಪಿಟಿ (ChatGPT) ಬಳಸಿದ ಆರೋಪ ಕೇಳಿಬಂದಿತ್ತು. ಪರೀಕ್ಷೆ ವೇಳೆ ಪ್ರಾಧ್ಯಾಪಕರು ಅವರನ್ನು ಹೊರಗೆ ಕರೆದೊಯ್ದಿದ್ದರು ಎಂದು ಸ್ನೇಹಿತ ತಿಳಿಸಿದ್ದಾರೆ

ಜಾತಿ ತಾರತಮ್ಯ ಇರಲಿಲ್ಲ

ಸಾಹಿಲ್ ಕುಟುಂಬವು ಕ್ಯಾಂಪಸ್‌ನಲ್ಲಿ ಸಾಂಸ್ಥಿಕ ಕಿರುಕುಳ ಮತ್ತು ಜಾತಿ ತಾರತಮ್ಯ ನಡೆದಿದೆ ಎಂದು ಆರೋಪಿಸಿದೆ. ಈ ಸಂಬಂಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣವೂ ದಾಖಲಾಗಿದೆ. ಆದರೆ ಸಾಹಿಲ್ ಸ್ನೇಹಿತ, “ನನ್ನ ಅನುಭವದಲ್ಲಿ ಜಾತಿ ತಾರತಮ್ಯ ಸಮಸ್ಯೆಯಾಗಿರಲಿಲ್ಲ” ಎಂದು ಹೇಳಿದ್ದಾರೆ.

IIT ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವಿನ ಕುರಿತು ಪ್ರತಿಭಟನೆ

ಐಐಟಿ ಬಾಂಬೆ ಕ್ಷಮೆಯಾಚನೆ

ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಐಐಟಿ ಬಾಂಬೆ ತನ್ನ ಹಿಂದಿನ ಹೇಳಿಕೆಗಳ ಬಗ್ಗೆ ಕ್ಷಮೆಯಾಚಿಸಿದೆ. ಸಾಹಿಲ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ, ತನಿಖೆ ಪೂರ್ಣಗೊಳ್ಳುವ ಮುನ್ನ ನಿರ್ದಿಷ್ಟ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಂಸ್ಥೆ ತಿಳಿಸಿದೆ. ನಿರ್ದೇಶಕ ಶಿರೀಷ್ ಕೇದಾರ್ ರಾಜೀನಾಮೆ ನೀಡಿದ್ದಾರೆ ಎಂಬ ವರದಿಯನ್ನೂ ಐಐಟಿ ಬಾಂಬೆ ತಳ್ಳಿಹಾಕಿದೆ.

18 ಬೇಡಿಕೆ ಮುಂದಿಟ್ಟ ವಿದ್ಯಾರ್ಥಿಗಳು

ಸಾಹಿಲ್ ಸಾವಿನ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಆಡಳಿತದ ಮುಂದೆ 18 ಬೇಡಿಕೆಗಳನ್ನು ಇಟ್ಟಿದ್ದಾರೆ. ಶೈಕ್ಷಣಿಕ ಸಮಿತಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ, ನಾಲ್ಕು ಆತ್ಮಹತ್ಯೆ ಪ್ರಕರಣಗಳ ಸ್ವತಂತ್ರ ತನಿಖೆ ಹಾಗೂ ಪ್ರಾಧ್ಯಾಪಕರಿಗೆ ಮಾನಸಿಕ ಆರೋಗ್ಯ ತರಬೇತಿ ನೀಡುವುದು ಪ್ರಮುಖ ಬೇಡಿಕೆಗಳಾಗಿವೆ.

ಇದನ್ನೂ ಓದಿ: ಪಾಕ್-ಅಫ್ಘಾನ್ ಗಡಿ ಸಂಘರ್ಷ ಮತ್ತೆ ಉಲ್ಬಣ: ಚೀನಾ ಸಂಧಾನಕ್ಕೆ ಹೊಸ ಸವಾಲು! | Pakistan Afghanistan Conflict

ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ, ಪರೀಕ್ಷಾ ಮೇಲ್ವಿಚಾರಕ ಸೂರ್ಯನಾರಾಯಣ ದೂಲ್ಲಾ ಅವರಿಗೆ ಬೆಂಬಲ ನೀಡಿದೆ. ಅನುಮತಿಯಿಲ್ಲದೆ ಮೊಬೈಲ್ ಬಳಕೆಯ ಪ್ರಕರಣದಲ್ಲಿ ಅವರು ನಿಯಮದಂತೆ ಕ್ರಮ ಕೈಗೊಂಡಿದ್ದರು ಎಂದು ಫೋರಂ ಹೇಳಿದೆ. ಈ ನಡುವೆ ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್)