ನ್ಯೂಸ್

ಪ್ರೊ. ಡಾ.ಯು.ಟಿ ಇಫ್ತಿಕಾರ್ ಅಲಿಗೆ ಹೊಸ ಜವಬ್ದಾರಿ

Bengaluru - Political - Shivananda Tagadur

ಬೆಂಗಳೂರು:
ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಅವರು ರಾಷ್ಟ್ರೀಯ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರೊಫೆಶನ್ಸ್ (ಘೆಇಅಏ) ಅಡಿಯಲ್ಲಿ ಸ್ಥಾಪಿಸಲಾದ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಕರ್ನಾಟಕದ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ. ಡಾ.ಯು.ಟಿ ಇಫ್ತಿಕಾರ್ ಅಲಿ ಅವರನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿಸ್ಸಾರ್ ಅಹಮದ್ ಸನ್ಮಾನಿಸಿದರು
ಖ್ಯಾತ ಶಿಕ್ಷಣ ತಜ್ಞ, ಆರೋಗ್ಯ ವೃತ್ತಿಪರ, ಕ್ರೀಡಾ ಉತ್ಸಾಹಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಅವರ ಸೇವೆಯನ್ನು ಸ್ಮರಿಸಲಾಯಿತು.
ಹೊಸ ಜವಬ್ದಾರಿಯಲ್ಲಿ, ಕರ್ನಾಟಕದಾದ್ಯಂತ ಎಲ್ಲಾ ಅಲೈಡ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ ಕಾಲೇಜುಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುವುದು ವಿಶೇಷ. ಡಾ. ಇಫ್ತಿಕಾರ್ ಅಲಿ ಅವರು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಸೇವೆ ಅನನನ್ಯ ಎಂದು ಸ್ಮರಿಸಲಾಯಿತು.
ಉಪಕುಲಪತಿ ಡಾ.ಅನುಭಾ ಸಿಂಗ್ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಡಾ. ಇಫ್ತಿಕಾರ್ ಅವರ ಕೊಡುಗೆ ಮತ್ತು ಸಮಾಜದ ಒಳಿತಿಗಾಗಿ ಬದಲಾವಣೆಯನ್ನು ತರುವಲ್ಲಿ ಅವರು ಈಗ ಇನ್ನಷ್ಟು ಸಹಕಾರಿಯಾಗುತ್ತಾರೆ ಎಂದರು.
ಪ್ರೆಸಿಡೆನ್ಸಿ ಗ್ರೂಪ್ ಆ್ ಇನ್‌ಸ್ಟಿಟ್ಯೂಷನ್‌ನ ಉಪಾಧ್ಯಕ್ಷರಾದ ಸಲ್ಮಾನ್ ಅಹ್ಮದ್ ಅವರು ಡಾ. ಇಫ್ತಿಕಾರ್ ಅವರನ್ನು ಅಭಿನಂದಿಸಿದರು.
ಕ್ಯಾಲಿಕಟ್‌ನ ಮರ್ಕಝ್ ನಾಲೆಡ್ಜ್ ಸಿಟಿಯ ಖ್ಯಾತ ವಿದ್ವಾಂಸ, ಶಿಕ್ಷಣ ತಜ್ಞ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಮುಹಮ್ಮದ್ ಅಬ್ದುಲ್ ಹಕ್ಕಿಂ ಅಝ್ಹರಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.