ನವದೆಹಲಿ: ಐಎಫ್ಎಸ್ ಅಧಿಕಾರಿಯೊಬ್ಬರ ಪರಿಸರ ಪ್ರೇಮ ಈಗ ನೆಟ್ಟಿಗರ ಮನಸೂರೆಗೊಂಡಿದೆ....!
ಇನ್ನು ಮುಂದೆ ನನ್ನ ಕಚೇರಿಗೆ ಭೇಟಿ ನೀಡುವ ವ್ಯಕ್ತಿಗಳಿಗೆ ಈ ಕಾರ್ಡ್ ಸಿಗಲಿದೆ ಎಂದು ಟ್ವೀಟರ್ನಲ್ಲಿ ವಿಸಿಟಿಂಗ್ ಕಾರ್ಡ್ನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ ಐಎಫ್ಎಸ್ ಅಧಿಕಾರಿ ಪರ್ವೀನ್ ಕೇಸ್ವಾನ್.
ಸಂಪರ್ಕ ವಿವರಗಳನ್ನು ನೀಡುವುದಷ್ಟೇ ಇದರ ಈ ಕಾರ್ಡ್ ಉದ್ದೇಶವಲ್ಲ, ಬದಲಿಗೆ ಇದು ಪರಿಸರ ಪ್ರೇಮವನ್ನು ಮೂಡಿಸುತ್ತದೆ. ಇದನ್ನು ನೆಟ್ಟರೆ ತುಳಸಿ ಗಿಡ ಬೆಳೆಯುತ್ತದೆ ಎಂದು ಕಾರ್ಡ್ ಮೇಲೆ ಮುದ್ರಿಸಲಾಗಿದೆ. ಹೀಗಾಗಿಇದು ಅನೇಕರಿಗೆ ಸ್ಪೂರ್ತಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ; ಬಸ್ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?
ವಿಸಿಟಿಂಗ್ ಕಾರ್ಡ್ ಮಾತ್ರವಲ್ಲದೇ, ವಿವಿಧ ಆಮಂತ್ರಣ ಪತ್ರಿಕೆಗಳು, ಮದುವೆ ಕಾರ್ಡ್ಗಳು, ಬಟ್ಟೆ ಹಾಗೂ ಇತರ ವಸ್ತುಗಳ ಮೇಲೆ ಕಟ್ಟಲಾಗುವ ಬೆಲೆ ಚೀಟಿಗಳನ್ನು ಇದೇ ಮಾದರಿಯಲ್ಲಿ ಪರಿಸರಸ್ನೇಹಿಯಾಗಿಸಬಹುದು ಎಂದು ಅವರು ವಿವರ ನೀಡಿದ್ದಾರೆ.
ತುಳಸಿ ಮಾತ್ರವಲ್ಲದೇ, ವಿವಿಧ ಸಸ್ಯ, ಹೂಗಿಡಗಳ ಬೀಜಗಳನ್ನು ಇಂಥ ಕಾರ್ಡಗಳಲ್ಲಿ ಬಳಸಬಹುದು ಎಂದು ಸಲಹೆ ನೀಡಿದ್ದಾರೆ. ಈ ಐಡಿಯಾಗೆ ಅನೇಕರು ಮಾರು ಹೋಗಿ ತಾವು ಫಾಲೋ ಮಾಡೋದಾಗಿ ಹೇಳಿದ್ದಾರೆ.