ನ್ಯೂಸ್

ಹಲ್ಲುಗಳ ಮೇಲೆ ಪ್ಲೇಕ್​ ಅಂಟಿಕೊಂಡಿದ್ದರೆ ನೀವು ಅಪಾಯಕ್ಕೆ ಸಮೀಪದಲ್ಲಿದ್ದಿರಿ ಎಂದರ್ಥ!: ಹೊಸ ಅಧ್ಯಯನವೊಂದರಲ್ಲಿ ಅಘಾತಕಾರಿ ಅಂಶ ಬಹಿರಂಗ | Plaque on teeth

Plaque on teeth: ಸಾಮಾನ್ಯವಾಗಿ ಕೆಲವರ ಹಲ್ಲುಗಳ ನಡುವೆ ಪ್ಲೇಕ್​(ಹೊಲಸು) ಅಂಟಿಕೊಂಡಿರುತ್ತದೆ. ಇದನ್ನು ಬಹಳ ದಿನಗಳಿಂದ ಕ್ಲಿನ್​ ಮಾಡದೇ ಹಾಗೇ ಬಿಟ್ಟಿದ್ದರೆ ನೀವು ಪಾರ್ಶ್ವವಾಯು ಸಂಭವಿಸುವ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನದ ವರದಿಯೊಂದು ಅಘಾತಕಾರಿ ಸಂಗತಿ ಬಹಿರಂಗಪಡಿಸಿದೆ.

ವಾರಕ್ಕೊಮ್ಮೆಯಾದರೂ ಪ್ಲೇಕ್​ ಸ್ವಚ್ಛಗೊಳಿಸದಿದ್ದರೆ ಅಪಾಯ ಅಧಿಕವಾಗಿರುತ್ತದೆ. ವಾರಕ್ಕೊಮ್ಮೆ ಸ್ವಚ್ಛ ಮಾಡಿದರೆ ಅವರಿಗೆ ಅಪಾಯ ಕಡಿಮೆ ಇದೆ ಎಂದು ಸೌತ್​ ಕೊರಿಲಿನಾ ಸ್ಕೂಲ್​ ಆಪ್​ ಮೆಡಿಸನ್​ ವಿಶ್ವವಿದ್ಯಾಲಯ ನಡೆಸಿದ ಹೊಸ ಅಧ್ಯಯನದ ವರದಿ ಬಹಿರಂಗಪಡಿಸಿದೆ. ಶೀಘ್ರದಲ್ಲಿಯೇ ಲಾಸ್​ ಏಂಜಿಲಾಸ್​ನಲ್ಲಿ ನಡೆಯುವ ಸ್ಟ್ರೋಕ್​ ಸಮ್ಮೇಳನದಲ್ಲಿ ಈ ವರದಿಯನ್ನು ಪ್ರಸುತ್ತ ಪಡಿಸಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ.

ಪ್ಲೇಕ್ ಸ್ವಚ್ಛಗೊಳಿಸದ ಕಾರಣದಿಂದ ನಮ್ಮ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತವೆ ಎಂದು ಸೌತ್ ಕೆರೊಲಿನಾ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ನರವಿಜ್ಞಾನ ವಿಭಾಗದ ಅಧ್ಯಕ್ಷ ಡಾ.ಸೌವಿಕ್ ಸೇನ್ ಹೇಳುತ್ತಾರೆ.

ಹಲ್ಲು ಮತ್ತು ಒಸಡುಗಳು ಆರೋಗ್ಯಕರವಾಗಿಲ್ಲದಿದ್ದರೆ ದೇಹದಲ್ಲಿ ಊತ ಹೆಚ್ಚಾಗುವ ಅಪಾಯವಿದೆ, ಇದು ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯಿಂದ ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ಅಧ್ಯಯನದ ವರದಿ ಉಲ್ಲೇಖ ಮಾಡಿದ್ದಾರೆ.

ಪ್ಲೋಸಿಂಗ್​​ ಪ್ರಕ್ರಿಯೆ ಸ್ಟ್ರೋಕ್​ ಅಪಾಯ ಕಡಿಮೆ ಮಾಡಬಹುದು

ಹಲ್ಲುಗಳ ನಡುವೆ ಸಿಲುಕಿರುವ ಬ್ಯಾಕ್ಟಿರಿಯಾ ಮತ್ತು ಪ್ಲೇಕ್​ ಅನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಪ್ಲೋಸಿಂಗ್​​ ಎಂದು ಹೇಳಲಾಗುತ್ತದೆ. ವಾರಕ್ಕೊಮ್ಮೆಯಾದರೂ ಪ್ಲೋಸಿಂಗ್​​ ಪ್ರಕ್ರಿಯೆ ನಡೆದರೆ ಶೇ.22ರಷ್ಟು ಪಾರ್ಶ್ವವಾಯುವಿನಿಂದ ತಪ್ಪಿಸಿಕೊಳ್ಳಬಹುದು ಎಂದು ಅಧ್ಯಯನದ ವರದಿ ಹೇಳುತ್ತದೆ.

ಹೃದ್ರೋಗ ಅಪಾಯವ ಇದ್ದವರಲ್ಲಿಯೂ ಅಪಾಯದ ಸಂಭವ ಶೇ.12 ರಷ್ಟು ಕಡಿಮೆಯಾಗುತ್ತದೆ ಮತ್ತು ಹೃದಯದಿಂದ ಬರುವ ರಕ್ತ ಹೆಪ್ಪುಗಟ್ಟುವಿಕೆಯಿಂದ ಪಾರ್ಶ್ವವಾಯು ಶೇಕಡಾ 44 ರಷ್ಟು ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)