astrology; ವಾಸ್ತು ಶಾಸ್ತ್ರದಲ್ಲಿ ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ಪಡೆಯಲು ಸಹಾಯ ಮಾಡುವ ಕೆಲವು ಸಲಹೆಗಳನ್ನು ನೀಡಲಾಗಿದೆ. ನಾವು ವಿದ್ಯಾರ್ಹತೆ ಆಧಾರದ ಮೇಲೆ ನಮ್ಮ ಯಾವುದೇ ವೃತ್ತಿಯನ್ನು ಪ್ರವೇಶಿಸುವ ಮೊದಲು ಕೆಲ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಸಂದರ್ಶನದಲ್ಲಿ ಉತ್ತೀರ್ಣರಾಗುವುದು ಒಂದು ಸಾಹಸವೇ ಆಗಿರುತ್ತದೆ.
ಹಾಗಾಗಿ ಆಯ್ಕೆಯ ಕೆಲಕ್ಕೆ ಹಾಜರಾಗುವ ಮೊದಲು ಸಂದರ್ಶನಕ್ಕೆ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ಮದ್ಯೆ ಪದೇ ಪದೇ ಸಂದರ್ಶನಗಳನ್ನು ನೀಡಿ ವಿಫಲವಾಗುತ್ತಿರುವವರ ನಡುವೆ ಸುಲಭವಾಗಿ ಯಶಸ್ಸನ್ನು ಸಾಧಿಸಿದ ಅನೇಕ ಜನರಿದ್ದಾರೆ. ಉದ್ಯೋಗ ಪರೀಕ್ಷೆಗಳಲ್ಲಿ ಯಶಸ್ಸಿಗೆ ಕೆಲವು ವಾಸ್ತು ಸಲಹೆಗಳನ್ನು ಉಲ್ಲೇಖಿಸಲಾಗಿದೆ. ಹಾಗಿದ್ರೆ ಉದ್ಯೋಗ ಸಂದರ್ಶನದಲ್ಲಿ ನಿಮಗೆ ಸಹಾಯ ಮಾಡುವ ಕೆಲ ವಾಸ್ತು ಸಲಹೆಗಳನ್ನು ತಿಳಿಯೋಣ.
ಸಂದರ್ಶನಕ್ಕೆ ಹೋಗುವ ಮೊದಲು, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ವಿಶೇಷವಾಗಿ ತಿಳಿ ಬಣ್ಣಗಳಾದ ಬಿಳಿ ಅಥವಾ ತಿಳಿ ನೀಲಿ. ಇದು ಶಾಂತಿಯುತ ಮನಸ್ಥಿತಿಯನ್ನು ಉಂಟುಮಾಡುತ್ತದೆ.
ಸಂದರ್ಶನಕ್ಕೆ ಹೋಗುವ ಮೊದಲು, ನಿಮ್ಮ ಬ್ಯಾಗ್ ಅಥವಾ ಜೇಬಿನಲ್ಲಿ ಐದು ತುಳಸಿ ಎಲೆಗಳು ಅಥವಾ ಐದು ಕಪ್ಪು ಎಳ್ಳನ್ನು ಇರಿಸಿ. ಇದು ನಕಾರಾತ್ಮಕ ಶಕ್ತಿಯನ್ನು ನಿಮ್ಮಿಂದ ದೂರವಿಡುತ್ತದೆ.
ನಿಮಗೆ ಆನ್ಲೈನ್ನಲ್ಲಿ ಸಂದರ್ಶನಕ್ಕೆ ಹಾಜರಾಗುವ ಅವಕಾಶ ಸಿಕ್ಕರೆ, ಸಂದರ್ಶನ ಕೊಠಡಿಯು ಈಶಾನ್ಯ (ವಾಯವ್ಯ) ಅಥವಾ ಉತ್ತರ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು, ಏಕೆಂದರೆ ಈ ದಿಕ್ಕುಗಳು ಧನಾತ್ಮಕ ಶಕ್ತಿಯನ್ನು ತರುತ್ತವೆ.
ಸಂದರ್ಶನದಲ್ಲಿ ಸಾಧ್ಯವಾದರೆ ಉತ್ತರ ಅಥವಾ ಪೂರ್ವಕ್ಕೆ ಮುಖಮಾಡಿ ಕುಳಿತುಕೊಳ್ಳಿ. ಇದು ಧನಾತ್ಮಕತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಸಂದರ್ಶನ ಕೊಠಡಿಯು ಸ್ವಚ್ಛವಾಗಿರಬೇಕು, ಯಾವುದೇ ಅವ್ಯವಸ್ಥೆ ಇರಬಾರದು. ಇದು ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುತ್ತದೆ.
ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
ಮನೆಯಿಂದ ಸಂದರ್ಶನಕ್ಕೆ ಹೊರಡುವ ಮೊದಲು ದೇವರಿಗೆ ಪ್ರಾರ್ಥನೆ ಮಾಡಿ. ಇದು ನಿಮ್ಮ ವೃತ್ತಿಜೀವನವನ್ನು ಸುಧಾರಿಸುತ್ತದೆ. ಮನೆಯಿಂದ ಹೊರಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆಗೆ ಮೊದಲ ಹೆಜ್ಜೆ ಇಡಿ. ಇದನ್ನು ಶುಭವೆಂದು ಪರಿಗಣಿಸಲಾಗಿದೆ.