ನ್ಯೂಸ್

ಯಮರಾಜನನ್ನು ಭೇಟಿಯಾಗುವ ಆತುರ ಇದ್ದರೆ ಹೆಣ್ಣುಮಕ್ಕಳನ್ನು ಮುಟ್ಟಿ: ಮಹಿಳೆಯರಿಗೆ ಕಿರುಕುಳ ನೀಡುವವರಿಗೆ CM ಯೋಗಿ ಎಚ್ಚರಿಕೆ!

ಉತ್ತರಪ್ರದೇಶ: ''ಯಮರಾಜನನ್ನು ಭೇಟಿಯಾಗಲು ಬಯಸಿದರೆ ಉತ್ತರ ಪ್ರದೇಶದಲ್ಲಿ ಹುಡುಗಿಯನ್ನು(ಮಹಿಳೆ) ಕಿರುಕುಳ ನೀಡಲು ಪ್ರಯತ್ನಿಸಿ ನೋಡೋಣ'' ಎಂದು ಯುಪಿ ಸಿಎಂ(CM) ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದರು.

ರಾಜ್ಯದ 18 ಮಿಲಿಯನ್ ಉಜ್ವಲ ಯೋಜನಾ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ವಿತರಿಸುವಾಗ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಯಾರಾದರೂ ನರಕಕ್ಕೆ ಟಿಕೆಟ್ ಬೇಕಾದರೆ, ಉತ್ತರ ಪ್ರದೇಶದಲ್ಲಿ ಹುಡುಗಿಯನ್ನು ಕಿರುಕುಳ ಮಾಡಲು ಪ್ರಯತ್ನಿಸಿ. ಮುಂದಿನ ಜಂಕ್ಷನ್‌ನಲ್ಲಿ ಯಮರಾಜ ಕಾಯುತ್ತಿರುತ್ತಾನೆ. ಹುಷಾರ್​ ಅಂತಹ ಅಪರಾಧಿಗಳ ವಿರುದ್ಧ ತಮ್ಮ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಅಪರಾಧಿಗಳು ಮತ್ತು ಗೂಂಡಾಗಳಿಗೆ ಬಹಿರಂಗ ವಾರ್ನಿಂಗ್​ ನೀಡಿದರು.

"ಕಳೆದ ಒಂಬತ್ತು ವರ್ಷಗಳಿಂದ, ಎಲ್ಲಾ ಸಮುದಾಯಗಳ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ಯಾರಾದರೂ ಹಬ್ಬದ ವಾತಾವರಣವನ್ನು ಅಡ್ಡಿಪಡಿಸಲು ಪ್ರಯತ್ನಿಸಿದರೆ, ಅವರಿಗೆ ಜೈಲು ಶಿಕ್ಷೆ ಕಾದಿದೆ" ಎಂದು ಅವರು ಹೇಳಿದರು. ಎಲ್ಲಾ ಧರ್ಮಗಳನ್ನು ಗೌರವಿಸುವಂತೆ ಮನವಿ ಮಾಡಿದರು ಸಿಎಂ,ಉತ್ತರ ಪ್ರದೇಶದಲ್ಲಿ ಈಗ ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ಸುರಕ್ಷಿತವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.(ಏಜೆನ್ಸೀಸ್​)