ಆನಂದಪುರ ಸಮೀಪದ ಅಂದಾಸುರ ಬೀರನಕೆರೆ ಸಮಿತಿಯಿಂದ ಕೆರೆಗೆ ಪೂಜೆ ಮಾಡಿ ಬಾಗಿನ ಸಲ್ಲಿಸಲಾಯಿತು. ರತ್ನಾಕರ ಹೊನಗೋಡು, ಮಂಜುನಾಥ, ಭರ್ಮಪ್ಪ ಇತರರಿದ್ದರು.  
ನ್ಯೂಸ್

ಕೆರೆಗಳು ಭರ್ತಿಯಾದರೆ ರೈತರು ಸಮೃದ್ಧಿ

ಆನಂದಪುರ: ಗ್ರಾಮೀಣ ಪ್ರದೇಶದ ಕೆರೆಗಳು ಜಲಭರಿತವಾದರೆ ಗ್ರಾಮದ ರೈತರು ಸಮೃದ್ಧಿ ಕಾಣಲು ಸಾಧ್ಯ ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.

ಅಂದಾಸುರ ಗ್ರಾಮದ ಬೀರನಕೆರೆ ಅಭಿವೃದ್ಧಿ ಸಮಿತಿಯಿಂದ ಸೋಮವಾರ ಏರ್ಪಡಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೂಳು ತುಂಬಿ ಹಾಳಾಗಿದ್ದ ಕೆರೆಯನ್ನು ಸ್ಥಳೀಯ ಕೆರೆ ಸಮಿತಿ ಜೀರ್ಣೋದ್ಧಾರ ಗೊಳಿಸಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನ ಮತ್ತು ಸ್ಥಳೀಯರ ಶ್ರಮದಾನದಿಂದ ಕೆರೆ ದುರಸ್ತಿಯಾಗಿದೆ. ಕೆರೆ ಸ್ವಚ್ಛತೆ ಕಾಪಾಡಿಕೊಂಡು, ಸಂಗ್ರಹವಾದ ನೀರನ್ನು ಮಿತವಾಗಿ ಬಳಸಿಕೊಂಡು ಜಲ ಸಂಪತ್ತು ಉಳಿಸಿಕೊಳ್ಳುವ ಜವಾಬ್ದಾರಿ ಗ್ರಾಮದ ಜನರ ಹೊಣೆ ಎಂದರು.

ಕೆರೆ ಅಭಿವೃದ್ಧಿಗೆ ನೆರವು ನೀಡಿದ್ದ ಹೊನಗೋಡು ರತ್ನಾಕರ ಅವರನ್ನು ಸನ್ಮಾನಿಸಲಾಯಿತು. ಕೆರೆ ದಡದಲ್ಲಿ ಹೂವಿನ ಅಲಂಕಾರ ಮಾಡಿ ಕೆರೆಗೆ ಬಾಗಿನ ಸಲ್ಲಿಸಲಾಯಿತು. ನಂತರ ಎಲ್ಲ ಮಹಿಳೆಯರಿಗೆ ಅರಿಶಿಣ-ಕುಂಕುಮ ನೀಡಿ ಗೌರವಿಸಲಾಯಿತು.

ಕೆರೆ ಸಮಿತಿ ಅಧ್ಯಕ್ಷ ಮಂಜುನಾಥ, ಜಿಪಂ ಮಾಜಿ ಸದಸ್ಯ ಅಂದಾಸುರ ಭರ್ಮಪ್ಪ, ಗ್ರಾಮದ ಹಿರಿಯರು, ಕೆರೆ ಸಮಿತಿ ಪದಾಧಿಕಾರಿಗಳು ಇದ್ದರು.