ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಲಡ್ಕ ಪ್ರಭಾಕರ ಭಟ್, ಪಟ್ಟಾಭಿರಾಮ, ಡಿ.ಎಚ್.ಶಂಕರಮೂರ್ತಿ, ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಉಷಾರಾಣಿ ಇದ್ದರು.  
ನ್ಯೂಸ್

ಹಿಂದು ಸಮಾಜ ಒಗ್ಗೂಡಿದರೆ ದೇಶ ಶಕ್ತಿಶಾಲಿ

ಶಿವಮೊಗ್ಗ: ದೇಶವೂ ಶಕ್ತಿಶಾಲಿ ಆಗಲಿಕ್ಕೆ ಮುಖ್ಯವಾಗಿ ಹಿಂದು ಸಮಾಜ ಒಗ್ಗಟ್ಟಾಗಬೇಕಿದೆ ಎಂದು ಆರ್‌ಎಸ್‌ಎಸ್ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಮಾಂಗಲ್ಯ ಮಂದಿರದಲ್ಲಿ ಭಾನುವಾರ ಶಾಸಕ ಎಸ್.ಎನ್.ಚನ್ನಬಸಪ್ಪ-ಉಷಾರಾಣಿ ದಂಪತಿಯ ಷಷ್ಠಿಪೂರ್ತಿ ಶಾಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಿಂದು ಸಮಾಜದ ಬಗ್ಗೆ ಚಿಂತಿಸಿ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕೆಂಬ ಕಲ್ಪನೆಯಲ್ಲಿ ಸಂಘ ಕಾರ್ಯಪ್ರವೃತ್ತವಾಗಿದೆ ಎಂದರು.
ಸಮಾಜದಿಂದ ನಾವು ಸಾಕಷ್ಟು ಪಡೆದಿದ್ದೇವೆ. ಅದರಲ್ಲಿ ಸ್ವಲ್ಪಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವ ಮೂಲಕ ಋಣ ತೀರಿಸಬೇಕಿದೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಬಿಜೆಪಿ ಸದಸ್ಯರು ಎನ್ನುವುದಕ್ಕಿಂತ ಮುಖ್ಯವಾಗಿ ಸಂಘದ ಸ್ವಯಂ ಸೇವಕರಾಗಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕೆಂಬ ಮನಸ್ಥಿತಿ ಹೊಂದಿದ್ದಾರೆ. ರಾಷ್ಟ್ರೀಯವಾದಿ ಚಿಂತನೆ ಅವರಲ್ಲಿದೆ ಎಂದರು.
ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ 60 ವರ್ಷ ಎಂಬುದು ಬಹಳ ಮುಖ್ಯ. ನಿವೃತ್ತಿಗೂ ವಯಸ್ಸಿಗೂ ಸಂಬಂಧವಿಲ್ಲ. 60ರ ನಂತರ ಹೊಸ ಜೀವನ, ಹೊಸ ಸಾಮಾಜಿಕ ಆಯಾಮ ಕಂಡುಕೊಳ್ಳುವುದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿಯ ಗುರುಶಾಂತೇಶ್ವರ ಮಹಾಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, 60 ವರ್ಷದವರೆಗೆ ಅರಿತು ಕೆಲಸ ಮಾಡಬೇಕು. 60 ದಾಟಿದ ಮೇಲೆ ಅದನ್ನು ಮರೆತು ಕೆಲಸ ಮಾಡಬೇಕು ಎನ್ನುವುದು ನೀತಿಯಾಗಿದೆ. ತದನಂತರ ಅಹಂಕಾರಕ್ಕೆ ವಿರಾಮ ಕೊಟ್ಟರೆ ಮುಂದಿನ ಬದುಕು ಸುಗಮವಾಗಲಿದೆ ಎಂದರು.
ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಲಗಂಗೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಲೋಕೇಶ್, ಹಾಲಪ್ಪ, ಅಂಬಿಕಾ ಹಾಲಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ ದಂಪತಿ ಉಪಸ್ಥಿತರಿದ್ದರು.