B.Sarojadevi: ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಬಿ ಸರೋಜಾ ದೇವಿ ಒಬ್ಬರು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಜುಲೈ 14ರಂದು ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಈ ಹಿನ್ನೆಲೆ ಶುಕ್ರವಾರ(ಜು.26) ಬೆಂಗಳೂರಿನಲ್ಲಿ ಸಂತಾಪ ಸೂಚಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚಲನಚಿತ್ರೋದ್ಯಮದ ಅನೇಕ ಕಲಾವಿದರು, ಸರೋಜಾ ದೇವಿಯವರ ಸಂಬಂಧಿಕರು, ರಾಜಕಾರಣಿಗಳು ಮತ್ತು ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಮಾಜಿ ಡಿಸಿಎಂ ಸಿ.ಅಶ್ವತ್ಥನಾರಾಯಣ ಕೂಡ ಭಾಗವಹಿಸಿದ್ದರು.
ನಾನು ಹೀರೋ ಆಗುತ್ತಿರಲಿಲ್ಲ: ಉಪೇಂದ್ರ
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಮತ್ತು ನಿರ್ದೇಶಕ ಉಪೇಂದ್ರ, ''ಸರೋಜಾ ದೇವಿ ಇಲ್ಲದಿದ್ದರೆ ನಾನು ನಾಯಕನಾಗುತ್ತಿರಲಿಲ್ಲ. ಅವರು 'ಎ' ಚಿತ್ರದ ಬಿಡುಗಡೆಗೆ ಮತ್ತು ಸೆನ್ಸಾರ್ ಸಮಸ್ಯೆಗಳಿಂದ ಮುಕ್ತರಾಗಲು ಸಹಾಯ ಮಾಡಿದರು. ಅವರ ಪ್ರೋತ್ಸಾಹವಿಲ್ಲದಿದ್ದರೆ ನಾನು ಈ ಮಟ್ಟದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ ಉಪ್ಪಿ, ವಿಷ್ಣುವರ್ಧನ್ ಮತ್ತು ಡಾ.ರಾಜ್‌ಕುಮಾರ್ ಪ್ರಶಸ್ತಿಗಳಂತೆ ಬಿ.ಸರೋಜಾ ದೇವಿ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂದು'' ಮನವಿ ಮಾಡಿದರು.
ಇದನ್ನೂ ಓದಿ:ಮಹಿಳೆಯರು ತಲೆ ಮೇಲೆ ಹೂ ಮುಡಿದುಕೊಳ್ಳುವುದರ ಹಿಂದಿನ ವೈಜ್ಞಾನಿಕ ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ! | Flowers
1955ರಲ್ಲಿ ಬಂದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆ ಬಳಿಕ ಆಫರ್ಗಳು ಅವರನ್ನು ಹುಡುಕಿ ಬಂದವು. ಮೇರು ನಟರಾದ ರಾಜ್‌ಕುಮಾರ್, ಕಲ್ಯಾಣ್ ಕುಮಾರ್ ಮೊದಲಾದವರ ಜೊತೆ ಸರೋಜಾ ದೇವಿ ತೆರೆ ಹಂಚಿಕೊಂಡರು. ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ಭಾಗ್ಯವಂತರು, ‘ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. (ಏಜೆನ್ಸೀಸ್)