ನ್ಯೂಸ್

ನನ್ನ ಕೊಲೆಯಾದ್ರೆ ಅದಕ್ಕೆ ಅಖಿಲೇಶ್ ಯಾದವ್ ಮತ್ತು SP ಹೊಣೆ: ಉಚ್ಚಾಟಿತ ಶಾಸಕಿ ಪೂಜಾ ಪಾಲ್ ಬಾಂಬ್​!

SP: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ರ ಸಹಿಷ್ಣುತೆ ನೀತಿಗಳನ್ನು ಸಾರ್ವಜನಿಕವಾಗಿ ಶ್ಲಾಘಿಸಿದ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಇತ್ತೀಚಿಗೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇದೀಗ ಪಕ್ಷದ ವಿರುದ್ಧ ಹೊಸದೊಂದು ಬಾಂಬ್​​ ಸಿಡಿಸಿದ್ದಾರೆ.

ಹೌದು, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್‌ಗೆ ಶಾಸಕಿ ಪೂಜಾ ಪಾಲ್​ ಬಹಿರಂಗ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು ತಮ್ಮ ಪತಿ ರಾಜು ಪಾಲ್ ಮಾದರಿಯಲ್ಲಿ ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ತನಗೆ ಯಾವುದೇ ಘಟನೆ ಸಂಭವಿಸಿದರೆ, ಅಖಿಲೇಶ್ ಯಾದವ್ ಮತ್ತು ಎಸ್‌ಪಿ ಅದಕ್ಕೆ ಕಾರಣರಾಗುತ್ತಾರೆ ಎಂದು ಪೂಜಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪೂಜಾ ಪಾಲ್ ಅವರು ಅಖಿಲೇಶ್ ಯಾದವ್ ಅವರಿಗೆ ಬರೆದ ಈ 2 ಪುಟಗಳ ಮುಕ್ತ ಪತ್ರವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪಾಲ್​ ಬರೆದ ಪತ್ರದಲ್ಲೇನಿದೆ?

''ನಾನು ಸಮಾಜವಾದಿ ಪಕ್ಷದ ಬೆಂಬಲವಿಲ್ಲದೆ ಪ್ರತಿಕೂಲ ಸಂದರ್ಭಗಳಲ್ಲಿ ಎರಡು ಬಾರಿ ಹೋರಾಡುವ ಮೂಲಕ ಶಾಸಕಿಯಾಗಿದ್ದೇನೆ. ನನ್ನ ಗಂಡನ ಕೊಲೆಗಾರನನ್ನು ಹಿಂದಿನ ಸರ್ಕಾರಗಳು ರಕ್ಷಿಸಿವೆ. ನೀವು ಬಂದ ನಂತರ, ನಿಮ್ಮ ಕೆಲಸದ ನಡವಳಿಕೆಯಿಂದ ಅಪರಾಧಿಗಳ ವಿರುದ್ಧ ನಮ್ಮಂತಹ ಹಿಂದುಳಿದ/ಬಡ ಜನರಿಗೆ ನ್ಯಾಯ ಒದಗಿಸಬಹುದು ಎಂದು ನಮಗೆ ಅನಿಸಿತು. ಅದಕ್ಕಾಗಿಯೇ ನಾನು ಸಮಾಜವಾದಿ ಪಕ್ಷದ ಕಾರ್ಯಕರ್ತರು/ನಾಯಕರ ಒತ್ತಾಯದ ಮೇರೆಗೆ ಪಕ್ಷಕ್ಕೆ ಸೇರಿಕೊಂಡೆ, ಚುನಾವಣೆಯಲ್ಲಿ ಸ್ಪರ್ಧಿಸಿದೆ ಮತ್ತು ಮೂರನೇ ಬಾರಿಗೆ ಶಾಸಕನಾದೆ ಎಂದಿದ್ದಾರೆ.

ನನ್ನ ಗಂಡನ ಕೊಲೆಗಾರರನ್ನು ಅವರ ಅಪರಾಧಕ್ಕೆ ಶಿಕ್ಷಿಸಬೇಕೆಂದು ನಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ನನಗೆ ನಿರಾಶೆ ಮಾತ್ರ ಸಿಕ್ಕಿತು. ಎಷ್ಟೇ ದೊಡ್ಡ ಅಪರಾಧಿಯಾಗಿದ್ದರೂ ಅವನಿಗೆ ಶಿಕ್ಷೆಯಾಗುತ್ತದೆ ಎಂದು ಬಿಜೆಪಿ ಅವರು ಹೇಳಿದ್ದರು. ಅವರು ಹೇಳಿದ್ದನ್ನೇ ಮಾಡಿದ್ದಾರೆ.

ತಮ್ಮ ಪತಿ ರಾಜು ಪಾಲ್ ಮಾದರಿಯಲ್ಲಿ ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿದೆ. ತನಗೆ ಯಾವುದೇ ಘಟನೆ ಸಂಭವಿಸಿದರೆ, ಅಖಿಲೇಶ್ ಯಾದವ್ ಮತ್ತು ಎಸ್‌ಪಿ ಅದಕ್ಕೆ ಕಾರಣರಾಗುತ್ತಾರೆ ಎಂದು ಪೂಜಾ ಹೇಳಿದ್ದಾರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್​)