ನ್ಯೂಸ್

AAP ಅಧಿಕಾರಕ್ಕೆ ಬಂದರೆ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 2,100 ರೂ.; ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಘೋಷಣೆ

ದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆಮ್​ ಪಾರ್ಟಿ(AAP) ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ 18 ವರ್ಷ ಮೇಲ್ಪಟ್ಟ ಪ್ರತಿ ಹೆಣ್ಣು ಮಕ್ಕಳಿಗೆ 2,100 ರೂ.ಗಳನ್ನು ತಮ್ಮ ಖಾತೆಗಳಿಗೆ ಜಮಾ ಮಾಡಲಾಗುವುದು ಎಎಪಿ ನಾಯಕ ಮತ್ತು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್​ ಗುರುವಾರ ಘೋಷಿಸಿದ್ದಾರೆ.

ದೆಹಲಿ ಎಎಪಿ ಕಚೇರಿಯಲ್ಲಿ ಸಿಎಂ ಅತೀಶಿ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಯೋಜನೆ ಕಾರ್ಯಕ್ರಮಗಳ ಬಗ್ಗೆ ನಿರ್ಧಾರಿಸಲಾಗಿದೆ ಎಂದು ಎಎಪಿ ಮೂಲಗಳು ತಿಳಿಸಿವೆ.

''ನಾನು ಈ ಹಿಂದೆ ಪ್ರತಿ ಮಹಿಳೆಗೆ 'ಮಹಿಳಾ ಸಮ್ಮಾನ್​ ಯೋಜನೆ' ಅಡಿ 1,000 ರೂ, ನೀಡಿವ ಭರವಸೆ ನೀಡಿದ್ದೇನೆ. ಆದರೆ, ಕೆಲ ಮಹಿಳೆಯರು ಒಂದು ಸಾವಿರ ಸಾಲುತ್ತಿಲ್ಲ ಎಂದು ನನ್ನ ಮುಂದೆ ಆಳಲು ತೋಡಿಕೊಂಡಿದ್ದರು. ಈ ಹಿನ್ನೆಲೆ ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಇದೇ ಯೋಜನೆಯಡಿಯಲ್ಲಿ 2,100 ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ದೆಹಲಿಯ 67 ಲಕ್ಷ ಮಹಿಳೆಯರಲ್ಲಿ 37 ಲಕ್ಷ ಮಹಿಳೆಯರು ಈ ಯೋಜನೆಗೆ ಈಗ ದೆಹಲಿಯ 18 ವರ್ಷದ ಎಲ್ಲಾ ಮಹಿಳೆಯರು ಅರ್ಹತೆ ಹೊಂದಿದ್ದಾರೆ. ಹೀಗಾಗಿ, ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ ಹಣಕಾಸು ಇಲಾಖೆಗೆ 4 ಸಾವಿರ ಕೋಟಿ ರೂ. ಅಧಿಕ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಈ ಯೋಜನೆಗೆ ನಾಳೆಯಿಂದಲೇ ನೋಂದಣಿ ಆರಂಭವಾಗುತ್ತದೆ. ಈಗ ಸಾಧ್ಯವಾದಷ್ಟು ಮಹಿಳೆಯರು ನೋಂದಣಿ ಮಾಡಿಕೊಳ್ಳಿ, ಆದರೆ, ಇನ್ನು 10ರಿಂದ 15 ದಿನಗಳಲ್ಲಿ ಚುನಾವಣೆ ಆಯೋಗ ದಿನಾಂಕ ಘೋಷಣೆ ಹಿನ್ನೆಲೆ ನೋಂದಣಿ ತಡವಾಗಬಹುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).