ನ್ಯೂಸ್

ಐಸಿಎಸ್​ಇ ಮತ್ತು ಐಎಸ್​ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

vinaymk1969

ನವದೆಹಲಿ: ಕೌನ್ಸಿಲ್​ ಫಾರ್​ ದ ಇಂಡಿಯನ್​ ಸ್ಕೂಲ್​ ಸರ್ಟಿಫಿಕೆಟ್​ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಇ) ಶುಕ್ರವಾರ 10 ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ 10ನೇ ತರಗತಿಯ ಉಳಿದಿರುವ ವಿಷಯಗಳ ಪರೀಕ್ಷೆಗಳು ಜುಲೈ 2ರಿಂದ 12ರವರೆಗೆ ನಡೆಯಲಿದ್ದರೆ, 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ. ದೇಶಾದ್ಯಂತ ಇರುವ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆಗಳು ನಡೆಯಲಿವೆ ಎಂದು ಸಿಐಎಸ್​ಸಿಇ ತಿಳಿಸಿದೆ.

12ನೇ ತರಗತಿ ಪರೀಕ್ಷೆ ವೇಳಾಪಟ್ಟಿ

ಜುಲೈ 1ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ (1ನೇ ಪೇಪರ್​)

ಜುಲೈ 3ರ ಬೆಳಗ್ಗೆ 11ಕ್ಕೆ ಬಿಜಿನೆಸ್​ ಸ್ಟಡೀಸ್​

ಜುಲೈ 5ರ ಬೆಳಗ್ಗೆ 11ಕ್ಕೆ ಭೂಗೋಳ ಶಾಸ್ತ್ರ

ಜುಲೈ 7ರ ಬೆಳಗ್ಗೆ 11ಕ್ಕೆ ಸೈಕಾಲಜಿ

ಜುಲೈ 9ರ ಬೆಳಗ್ಗೆ 11ಕ್ಕೆ ಸಮಾಜಶಾಸ್ತ್ರ

ಜುಲೈ 11ರ ಬೆಳಗ್ಗೆ 11ಕ್ಕೆ ಹೋಂ ಸೈನ್ಸ್​ (1ನೇ ಪೇಪರ್​)

ಜುಲೈ 13ರ ಬೆಳಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್​

ಜುಲೈ 14ರ ಬೆಳಗ್ಗೆ 11ಕ್ಕೆ ಆರ್ಟ್​ 5-ಕ್ರಾಫ್ಟ್​

10ನೇ ತರಗತಿ ಪರೀಕ್ಷೆ ವೇಳಾಪಟ್ಟಿ

ಜುಲೈ 2ರ ಬೆಳಗ್ಗೆ 11ಕ್ಕೆ ಭೂಗೋಳಶಾಸ್ತ್ರ ಎಚ್​ಸಿಜಿ 2ನೇ ಪೇಪರ್​

ಜುಲೈ 4ರ ಬೆಳಗ್ಗೆ 11ಕ್ಕೆ ಆರ್ಟ್​ ಪೇಪರ್​ 4 (ಅಪ್ಲೈಡ್​ ಆರ್ಟ್​)

ಜುಲೈ 6ರ ಬೆಳಗ್ಗೆ 11ಕ್ಕೆ (ಗ್ರೂಪ್​ 3 ಎಲೆಕ್ಟಿವ್​), ಕರ್ನಾಟಕ ಸಂಗೀತ, ಕಮರ್ಷಿಯಲ್​ ಅಪ್ಲಿಕೇಷನ್ಸ್​, ಕಂಪ್ಯೂಟರ್​ ಅಪ್ಲಿಕೇಷನ್ಸ್​, ಕುಕರಿ, ನಾಟಕ, ಎಕನಾಮಿಕ್​ ಅಪ್ಲಿಕೇಷನ್ಸ್​, ಎನ್ವಿರಾನ್​ಮೆಂಟಲ್​ ಅಪ್ಲಿಕೇಷನ್ಸ್​, ಫ್ಯಾಶನ್​ ಡಿಸೈನಿಂಗ್​, ಫ್ರೆಂಚ್​, ಜರ್ಮನ್​, ಹಿಂದೂಸ್ತಾನಿ ಸಂಗೀತ, ಹೋಂ ಸೈನ್ಸ್​, ಇಂಡಿಯನ್ಸ್​ ಡಾನ್ಸ್​, ಮಾಸ್​ ಮೀಡಿಯಾ ಕಮ್ಯುನಿಕೇಷನ್​, ಫಿಜಿಕಲ್​ ಎಜುಕೇಷನ್​, ಸ್ಪಾನಿಶ್​, ವೆಸ್ಟರ್ನ್​ ಮ್ಯೂಸಿಕ್​, ಯೋಗ, ಟೆಕ್ನಿಕಲ್​ ಡ್ರಾಯಿಂಗ್​ ಅಪ್ಲಿಕೇಷನ್ಸ್​

ಜುಲೈ 8ರ ಬೆಳಗ್ಗೆ 11ಕ್ಕೆ ಹಿಂದಿ

ಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್​

ಜುಲೈ 12ರ ಬೆಳಗ್ಗೆ 11ಕ್ಕೆ ಎಕಾನಾಮಿಕ್ಸ್​ (ಗ್ರೂಪ್​ 2 ಎಲೆಕ್ಟಿವ್​)